ವಿರಾಜಪೇಟೆ ಜು.19 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಶಿಕ್ಷಕರಾದ ಪಿ.ಕೆ.ಪವಿತ್ರ ಹಾಗೂ ಕಿರಣ್ ಕುಮಾರ್ ಅವರಿಗೆ ಬೀಳ್ಕೊಡಲಾಯಿತು.
ಬಿಳುಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಐನಂಡ ಪ್ರತಾಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಶಿಕ್ಷಕಿ ಅರುಣ್ ಆನ್ಸಿ ಡಿಸೋಜ ಶಿಕ್ಷಕರ ಅತ್ಯುತ್ತಮ ಸೇವೆಯ ಬಗ್ಗೆ ಮಾತನಾಡಿದರು.
ಪಿ.ಡಿ.ಓ ಚಂದ್ರಶೇಖರ್ ಮಾತನಾಡಿ ಶಿಕ್ಷಕರ ವರ್ಗದಿಂದ ಶಾಲೆಗೆ ಅಪಾರ ನಷ್ಟವಾಗುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಲೆಯ ಎಲ್ಲಾ ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕರ ಉತ್ತಮ ಕಾರ್ಯವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ವರ್ಗಾವಣೆಗೊಂಡ ಶಿಕ್ಷಕರು ಮಕ್ಕಳ ಬಿಸಿ ಊಟಕ್ಕೆ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.
ಇವರಿಗೆ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿಗಳು, ಅಡುಗೆ ಸಹಾಯಕರು, ಪ್ರಾಥಮಿಕ ಶಾಲಾ ಶಿಕ್ಷಕರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಅಮ್ಮತ್ತಿ ಕ್ಲಸ್ಟರ್ ಸಿ.ಆರ್.ಪಿ. ಪ್ರವೀಣ್ ಶಿಕ್ಷಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಜ್ಞಾನಮಣಿ, ಲೀಲಾವತಿ, ಲಿನ್ನಿ, ಸಾವಿತ್ರಿ, ಆಶಾರಾಣಿ ಸೇರಿದಂತೆ ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಹಾಜರಿದ್ದರು.
Breaking News
- *ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : “ವಕ್ಫ್ ಕಾಯ್ದೆ” ಹಿಂಪಡೆಯಲು ಒತ್ತಾಯ : ಪ್ರತಾಪ್ ಸಿಂಹ ವಾಗ್ಧಾಳಿ*
- *ಶಾಲಾ ಮಕ್ಕಳ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
- *ಕನ್ನಡ ರಾಜ್ಯೋತ್ಸವ : ನ.23 ರಂದು ಮಡಿಕೇರಿಯಲ್ಲಿ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮ*
- *ಗಂಗಮ್ಮ ನಿಧನ : ಶಾಸಕ ಪೊನ್ನಣ್ಣ ಸಂತಾಪ*
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*