ಮಡಿಕೇರಿ ಜು.19 : ಮಡಿಕೇರಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಲಯನ್ ಡಿ.ಮಧುಕರ್ ಶೇಟ್, ಕಾರ್ಯದರ್ಶಿಯಾಗಿ ಲಯನ್ ನಟರಾಜ್ ಕೆಸ್ತೂರು, ಜಂಟಿ ಕಾರ್ಯದರ್ಶಿಯಾಗಿ ಎಂ.ಪಿ.ನಾಗೇಂದ್ರ, ಖಜಾಂಚಿಯಾಗಿ ಲಯನ್ ಎನ್.ಬಿ.ರವಿ, ಉಪಾಧ್ಯಕ್ಷರಾಗಿ ಲಯನ್ ದಿನೇಶ್ ರಾವ್, ಲಯನ್ ಜೆ.ವಿ.ಕೋಟಿ, ಟೇಮರ್ ಆಗಿ ಲಯನ್ ಹೆಚ್.ಟಿ.ಚಾಮ, ಟೈಲ್ ಟ್ವಿಸ್ಟರ್ ಆಗಿ ಲಯನ್ ಕಮಲಾ ಮುರುಗೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಲಯನ್ ಮೋಹನ್ ಕುಮಾರ್, ಸದಸ್ಯತ್ವ ಸಮಿತಿಯ ಅಧ್ಯಕ್ಷರಾಗಿ ಲಯನ್ ಎಂ.ಎ.ನಿರಂಜನ್, ಕ್ಲಬ್ ಮೆಲ್ವಿಚರಕಾಗಿ ಲಯನ್ ಬಿ.ವಿ.ಮೋಹನ್ ದಾಸ್, ಎಲ್‍ಸಿಐಎಫ್ ಅಧ್ಯಕ್ಷರಾಗಿ ಲಯನ್ ಕವಿತಾ ಕಾವೇರಮ್ಮ, ನಿರ್ದೇಶಕರುಗಳಾಗಿ ಲಯನ್ ಕೆ.ಮಧುಕರ್, ಲಯನ್ ಪಿ.ಪಿ.ಸೋಮಣ್ಣ, ಲಯನ್ ಎಸ್.ಬಿ.ಮುರುಗೇಶ್, ಲಯನ್ ಸಂಗೀತಾ ಮೋಹನ್‍ದಾಸ್, ಲಯನ್ ಕೆ.ಕೆ.ದಾಮೋದರ್, ಲಯನ್ ಕೆ.ಟಿ.ಬೇಬಿ ಮ್ಯಾಥ್ಯು, ಲಯನ್ ಡಿ.ಜಿ.ಕಿಶೋರ್, ಲಯನ್ ಅಗಸ್ಟಿನ್ ಜಯರಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಲಯನ್ಸ್ ಸಂಸ್ಥೆ 317 ಡಿ ಯ 2ನೇ ಉಪ ರಾಜ್ಯಪಾಲ ಲಯನ್ ಕುಡುಪಿ ಅರವಿಂದ್ ಶೆಣೈ ಅವರು ಪದಗ್ರಹಣ ಸಮಾರಂಭ ನಡೆಸಿಕೊಟ್ಟರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು.
ನೂತನ ಅಧ್ಯಕ್ಷ ಮಧುಕರ್ ಶೇಟ್ ಮಾತನಾಡಿ ಹಿಂದಿನ ಅಧ್ಯಕ್ಷರುಗಳ ಸೇವೆಯನ್ನು ಸ್ಮರಿಸಿದರು. 10 ಸೆಂಟ್ ಜಾಗವನ್ನು ಉಚಿತವಾಗಿ ಕುಪ್ಪಂಡ ಚಿಮ್ಮಿ ಕುಟ್ಟಯ್ಯ ಅವರು (CRAIGMORT ESTATE) ತಮ್ಮ ತಂದೆ ಪಾಂಡಂಡ ನಂಜಪ್ಪ ಅವರ ಜ್ಞಾಪಕಾರ್ಥ ನೀಡಿದ ಫಲವಾಗಿ ಸಂಸ್ಥೆಗೆ ಸ್ವಂತ ಕಟ್ಟಡದ ಭಾಗ್ಯ ಲಭಿಸಿತು ಎಂದರು.
2023-24ನೇ ಸಾಲಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಮುಂಬರುವ ದಿನಗಳಲ್ಲಿ ಸಂಸ್ಥೆಯ ಸದಸ್ಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ನಿರ್ಗಮಿತ ಅಧ್ಯಕ್ಷರಾದ ಲಯನ್ ಕವಿತಾ ಕಾವೇರಮ್ಮ ಮಾತನಾಡಿ, 2022-23ನೇ ಸಾಲಿನ ಎಲ್ಲಾ ಸೇವಾ ಕಾರ್ಯಗಳಲ್ಲಿ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ, ನೂತನ ಸಮಿತಿಗೆ ಶುಭಕೋರಿದರು.
ಮಡಿಕೇರಿ ವಕೀಲರ ಸಂಘದ ಆಡಳಿತ ಮಂಡಳಿಗೆ ಸಂಸ್ಥೆಯ ಸದಸ್ಯ ಲಯನ್ ಎಂ.ಎ.ನಿರಂಜನ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ರಾಯಭಾರಿ ಲಯನ್ ಧನು ಉತ್ತಯ್ಯ, ಸಂಯೋಜಕ ಪಂಚಂ ತಿಮ್ಮಯ್ಯ, ಲಯನ್ ಮಮತಾ ಶೆಣೈ, ವಲಯಧ್ಯಕ್ಷರುಗಳಾದ ಲಯನ್ ರೋಹಿತ್, ಬಾಲಕೃಷ್ಣ ಹಾಗೂ ಸತೀಶ್ ಉಪಸ್ಥಿತರಿದ್ದರು.
ಮಾಸ್ಟರ್ ಸ್ಕಂದ ಮಧುಕರ್ ಶೇಟ್ ಪ್ರಾರ್ಥಿಸಿ, 22-23ನೇ ಸಾಲಿನ ಅಧ್ಯಕ್ಷ ಲಯನ್ ಕವಿತಾ ಕಾವೇರಮ್ಮ ಸ್ವಾಗತಿಸಿ, ಲಯನ್ ಸತೀಶ್ ರೈ ಧ್ವಜ ವಂದನೆ ನೆರವೇರಿಸಿದರು. ಲಯನ್ ಮೋಹನ್ ಕುಮಾರ್ ಲಯನ್ಸ್ ನ ನೀತಿ ಸಂಹಿತೆಯನ್ನು ವಾಚಿಸಿದರು. ನೂತನ ಅಧ್ಯಕ್ಷ ಲಯನ್ ಮಧುಕರ್ ಶೇಟ್ ಹಾಗೂ ಪ್ರತಿಭಾ ಮಧುಕರ್ ಶೇಟ್ ಇತರ ಸದಸ್ಯರೊಂದಿಗೆ ದೀಪ ಬೆಳಗಿದರು.
ಲಯನ್ ಕವಿತಾ ಕಾವೇರಮ್ಮ, ಲಯನ್ ಬೊಳ್ಳಪ್ಪ, ಲಯನ್ ಕಿಶೋರ್ ಹಾಗೂ ಲಯನ್ ನಿರಂಜನ್ 23-24ನೇ ಸಾಲಿನ ಸಮಿತಿ ಸದಸ್ಯರನ್ನು ಹಾಗೂ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಲಯನ್ ನಟರಾಜ್ ಕೆಸ್ತೂರು ಸರ್ವ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.