ಮಡಿಕೇರಿ ಜು.27 : ವನ್ಯಜೀವಿಗಳ ಅಂಗಾoಗ ಮತ್ತು ಬೇಟೆಗೆ ಬಳಸುವ ಆಯುಧಗಳನ್ನು ಹೊಂದಿದ್ದ ಆರೋಪಿಯನ್ನು ಹನೂರು ತಾಲ್ಲೂಕಿನ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ನಿವಾಸಿ ಚಿನ್ನತಂಬಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿಯ ಹಿನ್ನೆಲೆ ಈತನ ಮನೆಯ ಮೇಲೆ ದಾಳಿ ಮಾಡಿದ ಅರಣ್ಯ ಸಿಬ್ಬಂದಿಗಳು ಚಿಪ್ಪುಹಂದಿಯ ಚಿಪ್ಪುಗಳು, ಉಗುರುಗಳು, ಒಂದು ಚುಕ್ಕೆ ಜಿಂಕೆಯ ಕೊಂಬು, ಒಂದು ಕಸಾಪ್ ಕತ್ತಿ, 4 ಉರುಳುಗಳು ಮತ್ತು ಒಂದು ಚಾಕನ್ನು ವಶಪಡಿಸಿಕೊಂಡಿದ್ದಾರೆ.









