ಕುಶಾಲನಗರ ಜು.28 : ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ತಾಲೂಕಿನ ಆರು ಜನ ಪತ್ರಕರ್ತರು ಭಾಜನರಾಗಿದ್ದಾರೆ.
ತಾಲೂಕು ಸಂಘದ ವತಿಯಿಂದ ಈ ಬಾರಿ 6 ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಸಂಘದ ಸದಸ್ಯರಾದ ವನಿತಾ ಚಂದ್ರಮೋಹನ್ ಅವರ ತಾಯಿ ಐನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ. ಐನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮ ಮಾನವೀಯ ವರದಿಗೆ ರಘು ಹೆಬ್ಬಾಲೆ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ “ಜಲ ಸಂಕಟಕ್ಕೆ ಸಿಗುವುದೇ ಮುಕ್ತಿ” ವರದಿಗೆ ಲಭಿಸಿದೆ.
ಸಂಘದ ಸದಸ್ಯ ಎಂ.ಎನ್ ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ದಿ. ಎಂ ನಾರಾಯಣ, ಎನ್ ಪದ್ಮಾವತಿ ಅವರ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಕೊಂಡ ಹೆಚ್.ವಿ.ವಿನೋದ್ ಬರೆದ ಕುಶಾಲನಗರದಲ್ಲಿ ಅಕ್ರಮ ಬಡಾವಣೆ ದಂಧೆ ವರದಿಗೆ ದೊರೆತಿದೆ.
ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಅತ್ಯುತ್ತಮ ರಾಜಕೀಯ ವರದಿಯ ಪ್ರಶಸ್ತಿ ಕುಶಾಲನಗರ ಜನಮಿತ್ರ ವರದಿಗಾರ ಟಿ.ಆರ್ .ಪ್ರಭುದೇವ್ ಅವರ “ಬಿಜೆಪಿ ಅಶ್ವಮೇಧ ಕುದುರೆಗೆ ಕಡಿವಾಣ ಹಾಕಲಿದೆಯಾ ಕಾಂಗ್ರೆಸ್” ವರದಿಗೆ ಲಭಿಸಿದೆ.
ಕುಶಾಲನಗರದ ಶಾರದ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘದ ವರದಿ ಪ್ರಶಸ್ತಿ ಶಕ್ತಿಯಲ್ಲಿ ಪ್ರಕಟಗೊಂಡ ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂರರ ಸಂಭ್ರಮ ವಿಶೇಷ ವರದಿಗಾಗಿ ಚಂದ್ರಮೋಹನ ಎಂ.ಎನ್ ಅವರು ಭಾಜನರಾಗಿದ್ದಾರೆ.
ಸಂಘದ ಸದಸ್ಯರಾದ ಟಿ ಆರ್ ಪ್ರಭುದೇವ್ ಅವರ ತಂದೆ ದಿ. ಎನ್ ರಾಮಕೃಷ್ಣ ಮತ್ತು ತಾಯಿ ದಿ. ಕೆ ಎಂ ಸರಸಮ್ಮ ಇವರ ನೆನಪಿಗಾಗಿ ನೊಂದವರ ಪರವಾಗಿ ಪ್ರಕಟಗೊಂಡ ಅತ್ಯುತ್ತಮ ವರದಿಗೆ ನಾಗರಾಜ ಶೆಟ್ಟಿ ಕೆ ಕೆ ಅವರಿಗೆ ಶಕ್ತಿಯಲ್ಲಿ ಪ್ರಕಟಗೊಂಡ ಅರವತ್ತು ವರ್ಷ ಕಳೆದರೂ ದೊರೆಯದ ಹಕ್ಕು ಪತ್ರ, ಸೌಲಭ್ಯ ವಂಚಿತ ಹಾರಂಗಿಯ 270 ಕುಟುಂಬ ವರದಿಗೆ ಲಭಿಸಿದೆ. ಸಂಘದ ಸದಸ್ಯರಾದ ಕೆ ಬಿ ಸಂಶುದ್ದೀನ್ ಅವರು ತಮ್ಮ ತಾಯಿ ದಿ. ಕೆ ಕೆ ಖತೀಜ ಅವರ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಕೆ ಎಂ ಇಸ್ಮಾಯಿಲ್ ಕಂಡಕರೆ ಅವರ ಕ್ರೀಡಾ ತವರೂರಿನ “ಫುಟ್ಬಾಲ್ ಗೆ ಮರು ಜೀವ ತುಂಬಿದ ಕೆ ಡಿ ಎಫ್ ಎ” ಕ್ರೀಡಾ ವರದಿಗೆ ಲಭಿಸಿದೆ ಎಂದು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು.31ರಂದು ಕುಶಾಲನಗರದಲ್ಲಿ ಸಂಘದ ಆಶ್ರಯದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.








