ಸುಂಟಿಕೊಪ್ಪ,ಜು.28: ಸುಂಟಿಕೊಪ್ಪದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು.
ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಹರದೂರು ಗ್ರಾ.ಪಂ ಅಧ್ಯಕ್ಷ ಬಿ.ಡಿ.ಪದ್ಮನಾಭ ಉದ್ಘಾಟಿಸಿ, ನಮ್ಮ ದೇಶದ ವೀರ ಯೋಧರು ಪಾಕ್ ಸೈನಿಕರ ವಿರುದ್ಧ ಗೆಲುವು ಸಾಧಿಸಿದ ಮಹತ್ವದ ದಿನವಾಗಿದೆ. ಕಾರ್ಗಿಲ್ ಯುದ್ಧದ ಗೆಲುವು ಭಾರತೀಯ ಯೋಧರ ಧೈರ್ಯ, ತ್ಯಾಗ, ಬಲಿದಾನದ ಸಂಕೇತವಾಗಿದೆ ಎಂದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ ವಿಜಯ್ ದಿವಸ್ ಮಾತ್ರವಲ್ಲದೆ ಈ ಯುದ್ಧದಲ್ಲಿ ಹುತಾತ್ಮರಾದ 527 ಮಂದಿ ವೀರ ಯೋಧರನ್ನು ನೆನೆಯುವ ಮತ್ತು ಅವರುಗಳಿಗೆ ನಮನಗಳನ್ನು ಸಲ್ಲಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಸರಕಾರವು ಗಮನಹರಿಸಿ ಜಿಲ್ಲಾಡಳಿತ ವತಿಯಿಂದ ಸರಕಾರಿ ಕಾರ್ಯಕ್ರಮವಾಗಿ ನಡೆಸುವಂತಾಗಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಲ್ಟಿ ಮಿಡಿಯದ ಸಿಬ್ಬಂದಿಗಳು ಹಾಗೂ ಸುಂಟಿಕೊಪ್ಪದ ದೇಶಭಕ್ತ ಬಂಧುಗಳು ಪಾಲ್ಗೊಂಡಿದರು.









