ಸೋಮವಾರಪೇಟೆ ಜು.29 : ಸೋಮವಾರಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ,ಸಿ ಟ್ರಸ್ಟ್ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಕರ್ಕಳ್ಳಿ ರುದ್ರ ಭೂಮಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಭಿಮನ್ಯು ಕುಮಾರ್, ಸಾಮಾಜಿಕ ಅರಣ್ಯ ಇಲಾಖೆ ರೇಂಜರ್ ಕೆ.ವಿ.ಗಾನಶ್ರೀ, ಬೇಳೂರು ಗ್ರಾ.ಪಂ ಸದಸ್ಯರಾದ ಪಾರ್ವತಿ, ಯೋಗೇಂದ್ರ, ಸೋಮವಾರಪೇಟೆ ವಲಯದ ಮೇಲ್ವಿಚಾರಕರಾದ ಜಯಶ್ರೀ, ಕೃಷಿ ಮೇಲ್ವಿಚಾರಕರಾದ ರಾಜಣ್ಣ ಮತ್ತಿತರರು ಇದ್ದರು.








