ಮಡಿಕೇರಿ ಜು.29 : ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆ.20 ರಂದು ಎರಡನೇ ವರ್ಷದ ಪೊನ್ನಂಪೇಟೆ ತಾಲ್ಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.
ಅಂದು ಪೂರ್ವಹ್ನ 9ಗಂಟೆ ನಿಟ್ಟೂರು ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದ್ದು, ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಕ್ರೀಡಾಪಟುಗಳು ಗುರುತಿನ ಚೀಟಿ ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ಡ್ರೈವಿಂಗ್ ಲೈಸನ್ಸ್ ಹೀಗೆ ಸರ್ಕಾರ ನಿಗದಿಪಡಿಸಿದ ಯಾವುದೇ ಗುರುತಿನ ಚೀಟಿಯನ್ನು ತಂಡ ನೊಂದಾವಣೆಯ ಸಂದರ್ಭದಲ್ಲಿ ನೀಡಬೇಕು. ಆಸಕ್ತ ತಂಡಗಳು ಫಾರ್ಮರ್ಸ್ ಅಸೋಸಿಯೇಷನ್ ಬಾಳೆಲೆ ಇವರಲ್ಲಿ ನೊಂದಾವಣೆ ಶುಲ್ಕ ದೊಂದಿಗೆ ಆ.17 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಪುರುಷರ ವಾಲಿಬಾಲ್ ನೊಂದಾವಣೆ ಶುಲ್ಕ 2000, ವಿಜೇತರಿಗೆ ಪ್ರಥಮ ಬಹುಮಾನ 25,000 ರೂ ದ್ವಿತೀಯ 15, 000 ಆಟಗಾರರ ಸಂಖ್ಯೆ 6+2.
ಪುರುಷರಿಗೆ ಹಗ್ಗ ಜಗ್ಗಾಟ ನೊಂದಾವಣೆ ಶುಲ್ಕ 2000ರೂ ವಿಜೇತರಿಗೆ ಪ್ರಥಮ ಬಹುಮಾನ 25,000 ದ್ವಿತೀಯ 15,000.ಆಟಗಾರರ ಸಂಖ್ಯೆ 7+2
ಮಹಿಳೆಯರಿಗೆ ಹಗ್ಗಜಗ್ಗಾಟ ನೊಂದಾವಣೆ ಶುಲ್ಕ 1000 ರೂ. ಬಹುಮಾನದ ಮೊತ್ತವನ್ನು ತಂಡಗಳ ನೊಂದಾವಣೆಯ ಆಧಾರದಲ್ಲಿ ನಿಗದಿ ಮಾಡಲಾಗುವುದು.
ನಾಟಿ ಓಟದ ಸ್ಪರ್ಧೆ (ಸ್ಥಳದಲ್ಲೇ ನೊಂದಾವಣೆ) ಪ್ರೌಢ ಪ್ರಾಥಮಿಕ ಮತ್ತು ಸಿನಿಯರ್ ವಿಭಾಗದ ಬಾಲಕ ಬಾಲಕಿಯರು ಮಹಿಳಾ ಮತ್ತು ಪುರುಷರ ವಿಭಾಗಕ್ಕೆ ಪ್ರತ್ಯೇಕವಾಗಿ ಅಯೋಜನೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗೆ ಅಳಮೇಂಗಡ ಬೋಸ್ ಮಂದಣ್ಣ (ಅಧ್ಯಕ್ಷರು)- 9449118737, ಅದೇಂಗಡ ಮಂದಣ್ಣ (ಕಾರ್ಯದರ್ಶಿಗಳು) -8861548797, ಅದೇಂಗಡ ಚಂದ್ರಶೇಖರ್ ( ಖಜಾಂಚಿ) -9449933406, ಕಾಡೇಮಾಡ ಸುಬ್ಬಯ್ಯ (ಕ್ರೀಡಾ ಕಾರ್ಯದರ್ಶಿ) -7760870184 ಸಂಪರ್ಕಿಸಬಹುದಾಗಿದೆ.