ಮಡಿಕೇರಿ ಜು.30 : ಚೆನ್ನೈನಲ್ಲಿ ನಡೆದ “ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಫೆಸ್ಟಿವಲ್” ನಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯು ಭಾಗವಹಿಸಿ ಪ್ರಶಸ್ತಿ ಗೆದ್ದು ಇದೀಗ 3 ನೇ ವಿಶ್ವ ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಸುಮಾರು 90ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಐವತ್ತಕ್ಕೂ ಹೆಚ್ಚು ಮಕ್ಕಳ ಹೆಸರನ್ನು ವಿಶ್ವದಾಖಲೆ ಪುಸ್ತಕದಲ್ಲಿ ನಮೂದಿಸಿಕೊಂಡಿದ್ದ ಹೆಗ್ಗಳಿಕೆಯ ಏಕೈಕ ನೃತ್ಯ ಶಾಲೆ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನ 11 ವಿದ್ಯಾರ್ಥಿಗಳು “ಹಸಿವಿನ ಬೆಲೆ ಮತ್ತು ಆಹಾರವನ್ನು ಅನಾವಶ್ಯಕ ಪೋಲು ಮಾಡಬಾರದು” ಎಂಬ ಸಂದೇಶದ ವಿಭಿನ್ನ ನೃತ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರು ಹಾಗೂ ತೀರ್ಪುಗಾರರನ್ನು ಭಾವುಕರನ್ನಾಗಿಸಿ ಮೆಚ್ಚುಗೆಗೆ ಪಾತ್ರರಾದರು.
ವಿದ್ಯಾರ್ಥಿಗಳಾದ ಪ್ರಾರ್ಥನಾ ಎಂ.ಪಿ, ಕೋಯಲ್ ಪೊನ್ನಕ್ಕ ಯು.ಎ, ಲಿಯೋನೆಲ್ ಲ್ಯೂಕ್ ಡಿಸೋಜಾ, ಧನ್ಯ ಎಸ್.ಎಲ್, ರನ್ಯ ವಿ, ಚಿನ್ಮಯ್ ಎನ್.ಗೌಡ, ಅಕ್ಷಿತಾ ಕೆ.ಎಲ್, ವಿಸ್ಮಯ ಎಂ.ಎ, ಇಬ್ಬನಿ ಪಿ.ಎಲ್, ಅನನ್ಯ ಜೆ.ಎನ್ ಹಾಗೂ ಕೌಶಿಕ್ ಕೆ.ಪಿ ಅವರುಗಳು “ಸ್ಟಾರ್ ಪರ್ಫಾರ್ಮರ್” ಎಂಬ ಬಿರುದನ್ನು ತಮ್ಮದಾಗಿಸಿಕೊಂಡರು.
ನೃತ್ಯ ನಿರ್ದೇಶಕರು ಮತ್ತು ಸಂಸ್ಥೆಯ ಸ್ಥಾಪಕರೂ ಆದ ಮಾಸ್ಟರ್ ಅರ್ಪಿತ್ ಅನೂಪ್ ಡಿಸೋಜ ಹಾಗೂ ವಿದುಷಿ ಏಂಜಲ್ ರಶ್ಮಿ ಡಿಸೋಜ ಅವರು “ಲೆಜೆಂಡ್ ಕೊರಿಯೋಗ್ರಾಫರ್ 2023” ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಸಂಸ್ಥೆ “ಉತ್ತಮ ನೃತ್ಯ ಸಂಸ್ಥೆ” ಎಂಬ ಬಿರುದನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕೊಡಗಿನಲ್ಲೇ 3 ವಿಶ್ವ ದಾಖಲೆ ಪಡೆದ ಏಕೈಕ ನೃತ್ಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತದ ಸಿನಿಮಾಗಳ ನೃತ್ಯ ಸಂಯೋಜಕ ಕಲಾ ರತ್ನ ಜಾನಿ ಮಾಸ್ಟರ್ ಹಾಗೂ ಫೌಂಡರ್ ಆಫ್ ಮಿಡಿಯಾದ ಸೇವಾ ರತ್ನ ರಾಮಾನುಜ ಪ್ರಸನ್ನ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*