ಮಡಿಕೇರಿ, ಜು.31 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಂಘದ ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಆಶ್ರಯದಲ್ಲಿ ಇದೇ ಆ.5ರಂದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಚೆಸ್, ಟೇಬಲ್ ಟೆನ್ನಿಸ್, ಕೇರಂ ಮತ್ತು ಮೈಂಡ್ ಗೇಮ್ ಸ್ಪರ್ಧೆಗಳು ನಡೆಯಲಿವೆ. ಟೇಬಲ್ ಟೆನಿಸ್‍ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಟೇಬಲ್ ಟೆನಿಸ್ ಮತ್ತು ಕೇರಂ ಡಬಲ್ಸ್‍ಗೆ ಸ್ಪರ್ಧಿಗಳೇ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಪ್ರವೇಶ ಶುಲ್ಕ 100 ರೂ. ನಿಗದಿಪಡಿಸಲಾಗಿದ್ದು, ಹೆಸರು ನೋಂದಾವಣೆಗೆ ಕೊನೇ ದಿನ ಆ.1 ಸಂಜೆ 5 ಗಂಟೆ. ಸ್ಪರ್ಧಿಗಳು ನವೀನ್ ಸುವರ್ಣ (9880191566) ಅವರಲ್ಲಿ ಹೆಸರು ನೋಂದಾಯಿಸಿಕೊಂಡು, ಅದೇ ಮೊಬೈಲ್ ಸಂಖ್ಯೆಗೆ ಪ್ರವೇಶ ಶುಲ್ಕದ ಹಣವನ್ನು ಆನ್‍ಲೈನ್ ಮೂಲಕ ಪಾವತಿಸಬೇಕು ಎಂದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










