ಮಡಿಕೇರಿ ಜು.31 : 5ನೇ ವಿಶ್ವ ಕಾಫಿ ಸಮಾವೇಶದ ಲೋಗೋವನ್ನು ಸಮಾವೇಶದ ಬ್ರಾಂಡ್ ಅಂಬಾಸಿಡರ್ ಖ್ಯಾತ ಬ್ಯಾಡ್ ಮಿಂಟನ್ ಕ್ರೀಡಾ ಪಟು ರೋಹನ್ ಬೋಪಣ್ಣ ಅನಾವರಣಗೊಳಿಸಿದರು.
ಕಾಫಿ ಮಂಡಳಿ ಸಿಇಓ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾಫಿ ಆರ್ಟ್ ನ ಹಿಮ ಬಿಂದು ಅವರ ಕುಂಚದಲ್ಲಿ ಲೋಗೋ ರಚನೆಗೊಂಡಿದೆ.
5ನೇ ವಿಶ್ವ ಕಾಫಿ ಸಮಾವೇಶ ಸೆ.25 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಶ್ವದ ವಿವಿಧ ಕಾಫಿ ಉದ್ಯಮಿಗಳು ಹಾಗೂ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ.











