ಮಡಿಕೇರಿ ಜು.31 : ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿಯನ್ನು ರಚಿಸಲಾಯಿತು.
ನಗರದ ವ್ಯಾಂಡಮ್ ಎಂಟರ್ಪ್ರೈಸಸ್ ಸಂಸ್ಥೆಯ ಸಭಾಂಗಣದಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಚಂದ್ರಶೇಖರ್ ಕುಲಾಲ್ , ಗೌರವ ಸಲಹೆಗಾರರಾಗಿ ಶ್ರೀ ಕುಶಾಲಪ್ಪ, ಲಯನ್ ದಾಮೋದರ, ನಾರಾಯಣ ಮೂಲ್ಯ, ಉಪಾಧ್ಯಕ್ಷರಾಗಿ ಅಶ್ವಥ್, ಜಯಪ್ರಕಾಶ್, ಪ್ರಧಾನಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಹ ಕಾರ್ಯದರ್ಶಿಯಾಗಿ ಅರುಣ್ ಕುಲಾಲ್ , ಉದಯ್ ಕುಲಾಲ್ ಆಯ್ಕೆಯಾದರು.
ಖಜಾಂಚಿಯಾಗಿ ಸುರೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್, ಲೋಕೇಶ್, ಕ್ರೀಡಾ ಸಹ ಕಾರ್ಯದರ್ಶಿ ಗಳಾಗಿ ಮಂಜುನಾಥ, ದಯಾನಂದ್, ಶೃತಿಕಾ, ಕೌಶಿಕ್ , ಶರಣು, ರಂಜನ್ ಕುಲಾಲ್ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಗಳಾಗಿ ಗಿರೀಶ್ ಕುಲಾಲ್ , ದಿನೇಶ್ ಕುಲಾಲ್, ಅಪ್ಪಾಜಿ, ಅರುಣ್ ಕುಲಾಲ್ , ರಾಮಚಂದ್ರ, ಭರತ್ , ಸಂಘಟನಾ ಸಹ ಕಾರ್ಯದರ್ಶಿಗಳಾಗಿ ಪ್ರಮೋದ್ ಕುಲಾಲ್, ನಾಗೇಶ್ ಕುಲಾಲ್ ಮಕಂದೂರು, ಯತೀಶ್, ಸತೀಶ್ ಕುಲಾಲ್, ಶರಣ್ ನೇಮಕಗೊಂಡರು.
ನಿರ್ದೇಶಕರುಗಳಾಗಿ ವಿನು, ಮಂಜುನಾಥ್, ಅಶೋಕ್ , ಕೆ.ವೈ. ಲಕ್ಷ್ಮಣ್, ರಾಜಮಣಿ, ಶ್ರೀನಿವಾಸ್ , ದೇವಯ್ಯ ಅವರನ್ನು ಆಯ್ಕೆಮಾಡಲಾಯಿತು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಂತರ ಮಾತನಾಡಿದ ಕೊಡಗು ಯುವ ಘಟಕದ ಗೌರವ ಸಲಹೆಗಾರ ಕುಶಾಲಪ್ಪ, ಯುವ ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮುಂದೆ ಯಾವ ರೀತಿ ಯುವ ಘಟಕ ಮುಂದುವರಿಯಬೇಕೆಂದು ಸಲಹೆ ನೀಡಿದರು.
ವ್ಯಾಂಡಮ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರಾದ ಲಯನ್ ದಾಮೋದರ, ಮಾತನಾಡಿ ಕುಲಾಲ ಸಂಘ ದ ಸ್ಥಾಪಕ ಅಧ್ಯಕ್ಷ ಮುತ್ತಮ್ಮ ನೀಡಿದ ಸೇವೆಯನ್ನು ನೆನಪಿಸಿದರು. ಮುಂದೆ ಯುವಕರು ಸಂಘದಲ್ಲಿ ಸಕ್ರಿಯಗೊಂಡು ಮತ್ತಷ್ಟು ಸಂಘವನ್ನು ಬಲಪಡಿಸಿ ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಅಧ್ಯಕ್ಷ ನಾಣಯ್ಯ ಮಾತನಾಡಿ, ಯುವ ಘಟಕವು ಕೊಡಗು ಜಿಲ್ಲಾ ಸಂಘಕ್ಕೆ ಪೂರಕವಾಗಿ ಕೆಲಸ ಮಾಡಲಿ ಮತ್ತು ಇದರಿಂದ ಸಂಘವು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದು ನುಡಿದರು.
ನಂತರ ಮಾತನಾಡಿದ ಅರುಣ್ ಕುಲಾಲ್ ಕೂಡಿಗೆ, ಯುವಕರು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ ಜಿಲ್ಲೆಯ ಎಲ್ಲಾ ಯುವಕರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಆಗ ಸಮಾಜ ಬಾಂಧವರ ಕಣ್ಣೀರು ಒರೆಸಲು ಈ ಘಟಕವು ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ
ಎಂದು ಸಲಹೆ ನೀಡಿದರು.
ಚಂದ್ರಶೇಖರ್ ಕುಲಾಲ್ ಮೂರ್ನಾಡ್ ಸ್ವಾಗತಿಸಿದರು, ಕೆ.ಕೆ. ಶ್ರೀನಿವಾಸ್ ಪ್ರಾರ್ಥಿಸಿದರು, ಪವನ್ ಕುಲಾಲ್ ಸರ್ವರನ್ನು ವಂದಿಸಿದರು.