ಸೋಮವಾರಪೇಟೆ ಆ.1 : ಬೆಜೆಪಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಹಿರಿಯ ಮುತ್ಸದಿ ರಾಜಕಾರಣಿ ಬಿ.ಬಿ.ಶಿವಪ್ಪ ಕಾರಣ ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಂಜು ಬಣ್ಣಿಸಿದರು.
ಮಹಿಳಾ ಸಮಾಜದಲ್ಲಿ ಬಿ.ಬಿ.ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಪುಣ್ಯಸ್ಮರಣಾ ಕಾಯಕ್ರವiದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಿವಪ್ಪನವರು ತಮ್ಮ ಆಸ್ತಿ ಮಾರಾಟವಾದರೂ ಪರ್ವಾಗಿಲ್ಲ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತೇನೆ ಎಂದು ಪಣ ತೊಟ್ಟು ಪಕ್ಷ ಸಂಘಟನೆಗೆ ಶ್ರಮಿಸಿದವರು. ಈಗ ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಅವರು ಸಕಲೇಶಪುರದಲ್ಲಿಯೂ ಪಕ್ಷವನ್ನು ಸಂಘಟಿಸಿದರ ಫಲವಾಗಿ ನಾನು ಈ ದಿನ ಶಾಸಕನಾಗಲು ಸಾಧ್ಯವಾಗಿದೆ. ಇಂತಹ ಧೀಮಂತ ವ್ಯಕ್ತಿಯ ಪುಣ್ಯ ಸ್ಮರಣಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕೆಂದರು.
ಮಾಜಿ ಸಚಿವ ಅಪ್ಪಚು ರಂಜನ್ ಮಾತನಾಡಿ, ಕರ್ನಾಟಕದ ಬಿಜೆಪಿಗೆ ಶಿವಪ್ಪ ಹಾಗೂ ಸುಶೀಲಮ್ಮ ಮಾತಾ-ಪಿತೃಗಳಿದ್ದಂತೆ. ಶಿವಪ್ಪನವರು ಯಾವತ್ತೂ ಅಧಿಕಾರಕ್ಕಾಗಿ ಪಕ್ಷ ಸಂಘದಸಿದವರಲ್ಲ. ಹಿಂದೆ 44 ಮಂದಿ ಬಿಜೆಪಿ ಶಾಸಕರಿದ್ದ ಸಂದರ್ಭ ಬಿ.ಬಿ.ಶಿವಪ್ಪರವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವಾಗ ನಾನು ಸೇರಿದಂತೆ ಕೇವಲ 12 ಮಂದಿ ಮಾತ್ರ ಪರವಾಗಿ ಮತ ಚಲಾಯಿಸಿದ್ದು ಬೇಸರದ ಸಂಗತಿಯಾಗಿತ್ತು. ಒಟ್ಟಿನಲ್ಲಿ ರಾಜ್ಯದಲ್ಲಿನ ಬಿಜೆಪಿಯ ಅಡಿಪಾಯವೇ ಬಿ.ಬಿ. ಶಿವಪ್ಪನವರು ಎಂದು ವರ್ಣಿಸಿದರು.
ಬಿಜೆಪಿ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಡಿ.ಮಂಜುನಾಥ್, ಬಿ.ಬಿ. ಶಿವಪ್ಪ ಅವರ ಪುತ್ರ ಪ್ರತಾಪ್, ಪ್ರಮುಖರಾದ ಬಿ.ಟಿ. ತಿಮ್ಮಶೆಟ್ಟಿ, ಮಾಲಂಬಿ ಪ್ರೇಮನಾಥ್, ಕೆ.ಎನ್. ಶಿವಕುಮಾರ್ ಇದ್ದರು.
Breaking News
- *ಕಳೆದು ಹೋಗಿದೆ*
- *ಫೆ.27 ಮತ್ತು 28 ರಂದು ಕೊಡವ ಬಲ್ಯನಮ್ಮೆ : ವಿವಿಧ ಸ್ಪರ್ಧೆಗಳಿಗೆ ಆಹ್ವಾನ*
- *ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*