ಸೋಮವಾರಪೇಟೆ ಆ.1 : ನಿಡ್ತ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರವನ್ನು ಕಡಿದು, ಸಾಗಿಸಲು ಕೆತ್ತನೆ ಮಾಡುತ್ತಿದ್ದ ಸಂದರ್ಭ ದಾಳಿ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಬಸುರುಗುಪ್ಪೆ ಗ್ರಾಮದ ಎ.ಸಿ.ಯೋಗೇಶ್ ಬಂಧಿತ ಆರೋಪಿ. ಅರಣ್ಯದಲ್ಲಿ ಶ್ರೀಗಂಧ ಮರವನ್ನು ಬುಡ ಸಮೇತ ಕಡಿದು, 12 ತುಂಡುಗಳನ್ನಾಗಿ ಪರಿವರ್ತಿಸಿ ಸಾಗಿಸುವ ಪ್ರಯತ್ನದಲ್ಲಿದ್ದಾಗ ಬಂಧಿಸಲಾಗಿದೆ.
ಎಸಿಎಫ್ ಎ.ಎ.ಗೋಪಾಲ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಆರ್‍ಎಫ್‍ಒ ಎಚ್.ಪಿ.ಚೇತನ್, ಡಿಆರ್‍ಎಫ್‍ಒ ಎಚ್.ಎಂ.ರಾಕೇಶ್, ಗಸ್ತುಪಾಲಕರಾದ ಪ್ರಸಾದ ಕುಮಾರ್, ಎ.ಎಸ್. ಸದಾನಂದ ಹಿಪ್ಪರಗಿ, ಅರಣ್ಯ ವೀಕ್ಷಕರಾದ ಪ್ರವೀಣ್, ಚೆಟ್ಟಿಯಪ್ಪ, ವಿಕಾಸ್, ಧರ್ಮ, ಉದಯ್ ಕುಮಾರ್, ವಾಹನ ಚಾಲಕ ಸಂತೋಷ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.