ಮಡಿಕೇರಿ ಆ.1 : ಇತ್ತೀಚಿಗೆ ದೈವಾಧೀನರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮೀನಾಕ್ಷಿ ಅವರಿಗೆ ಮಡಿಕೇರಿ ಬ್ರಹ್ಮಾಕುಮಾರೀಸ್ ಲೈಟ್‍ಹೌಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಲೈಟ್‍ಹೌಸ್ ಸಭಾಂಗಣದಲ್ಲಿ ಮೃತರ ಭಾವಚಿತ್ರಕ್ಕೆ ಅವರ ಸಹೋದರರು, ಬಂಧುಗಳು, ಬ್ರಹ್ಮಕುಮಾರ, ಕುಮಾರಿಯರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿ ಜೀ ಮಾತನಾಡಿ, ಕೊಡಗಿನ ಗೋಣಿಕೊಪ್ಪ ಸಮೀಪದ ಚಿಕ್ಕಮಂಡೂರಿನ ಕಳ್ಳಿಚಂಡ ಪರಿವಾರದ ಮೀನಾಕ್ಷಿ ಅವರು ತಮ್ಮ ಮೂಲಕ ಆಧ್ಯಾತ್ಮ ಮಾರ್ಗದಲ್ಲಿ ಸಾಗುವ ಸಂಕಲ್ಪ ಮಾಡಿದರು.
1978ರಲ್ಲಿ ಈಶ್ವರೀಯಜ್ಞಾನ ಪಡೆದು ನಂತರ 1980 ರಿಂದ ಸಮರ್ಪಿತರಾಗಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ 1993ರಿಂದ ಕೇರಳದ ಕಣ್ಣೂರು ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ 30 ವರ್ಷಗಳಿಂದ ಸೇವೆ ಮಾಡಿ ಅನೇಕರಿಗೆ ಮಾರ್ಗದರ್ಶನ ನೀಡಿ ಆಧ್ಯಾತ್ಮಿಕ ಪ್ರೇರಣೆ ತುಂಬಿ ಅನೇಕ ಸೇವಾ ಕೇಂದ್ರಗಳನ್ನು ತೆರೆದು ಅನೇಕರ ಜೀವನಕ್ಕೆ ಮಾರ್ಗದರ್ಶಕರಾದರು.
ತಮ್ಮ 69 ವಯಸ್ಸಿನ ಹಿರಿಯ ಸಹೋದರಿಯವರು ಅನೇಕ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಯಲ್ಲಿ ಯಶಸ್ವಿ ಸೇವೆ ಮಾಡಿದರು. ಕೊಡಗಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಸಹೋದರಿಯರು ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈಶ್ವರೀಯ ಸಂದೇಶ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.