ಮಡಿಕೇರಿ ಆ.1 : ಮೈಸೂರಿನಲ್ಲಿ ಮಂಜುಶ್ರೀ ಮಾಜಿಕ್ ಸ್ಟೆಪ್ಸ್ ವತಿಯಿಂದ ನಡೆದ 35ನೇ ವರ್ಷದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡಾನ್ಸ್ ಸ್ಟುಡಿಯೋ ತಂಡ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ಸಬ್ ಜೂನಿಯರ್ ಕಪಲ್ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.
ಡಿಜೆ ಡ್ಯಾನ್ಸ್ ಸ್ಟುಡಿಯೋ ವತಿಯಂದ ಹಾಸನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗೆದ್ದುಕೊಂಡಿದೆ. ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಆರ್ಯನ್, ತೇಜಸ್, ಪ್ರವೀಣ್, ಕೀರ್ತನ್, ಶಿವ ಕುಮಾರ್, ಚಂದನ್, ಅಭಿನವ್, ಯಾನ ಶೆಟ್ಟಿ, ಜಾಹ್ನವಿ ಬೋಜಮ್ಮ, ಜನನಿ, ವೆನಿಷ, ತಶ್ಮಿತ, ಆಧ್ಯ ದೇಚಮ್ಮ, ವರ್ನಿಕ, ಪ್ರೇಕ್ಷಾ ಬಿ.ಆರ್, ಪ್ರೇಕ್ಷಾ ಎಂ.ಕೆ, ಐಶ್ವರ್ಯ ರೈ, ಪ್ರಜ್ಞಾ, ಕಿಷಿ ಕಾವೇರಮ್ಮ, ಚಾರ್ವಿತ, ಸಬ್ ಜೂನಿಯರ್ ಕಪಲ್ನಲ್ಲಿ ದಿಶಾ ಹಾಗೂ ಸಾನ್ವಿಕ ಪಾಲ್ಗೊಂಡಿದ್ದರು.
ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.







