ಚೆಯ್ಯಂಡಾಣೆ ಆ.1 : ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೋಡಿರ ಎಂ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ನಂಬಿಯಪಂಡ.ಎ.ಅಯ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಕೋಡಿರ.ಎಂ.ನಾಣಯ್ಯ, ಐತಿಚಂಡ ಪಿ.ಮಾದಯ್ಯ, ಪಾಂಡಂಡ.ಎಂ.ಸುಬ್ರಮಣಿ, ಮೇದುರ.ಎನ್.ಕುಶಾಲಪ್ಪ, ನೆಲ್ಲಚಂಡ.ಟಿ.ಕಿರಣ್ ಕಾರ್ಯಪ್ಪ,ಬೆಪುಡಿಯಂಡ.ಎಸ್.ಜಾನ್ಸಿ, ಕೆ.ಜೆ.ಶಾರದ, ಕೈಪಂಗಡ.ಕೆ.ಉತ್ತಪ್ಪ, ಸೊಮ್ಮಯ್ಯ.ಎಂ.ಎ, ಹೆಚ್.ಕೆ.ಗಂಗಮ್ಮ , ಐತಿಚಂಡ.ಕೆ. ವನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ.ಜಿ. ಸಂದೀಪ್ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ವರದಿ : ಅಶ್ರಫ್









