ಚೆಟ್ಟಳ್ಳಿ ಆ.1 : ಗೋವಾದಲ್ಲಿ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ‍್ಯಾಲಿಯಲ್ಲಿ ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್ ನಲ್ಲಿ ದ್ವಿತೀಯ ಹಾಗೂ ಕ್ಯಾಟಗರಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ದೆಹಲಿಯ ಕೂಗರ್ ಮೋಟರ್ಸ್ ವತಿಯಿಂದ ದಕ್ಷಿಣಗೋವಾದಲ್ಲಿ ನಡೆದ ವಿಶ್ವದಲ್ಲೇ 5ನೇ ಕಠಿಣಕರ ಮೋಟಾರ್ ಕ್ರೀಡೆಯ ರ‍್ಯಾಲಿಯಲ್ಲಿ ಒಂದಾದ ಸಾಹಸಕ್ರೀಡಾ ಪ್ರತೀ ವರ್ಷ ಮಳೆಗಾಲದಲ್ಲಿ ಆಯೋಜಿಸುವ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ‍್ಯಾಲಿಯು ಒಟ್ಟು 26 ಕಠಿಣಕರ ಹಂತಗಳಿದ್ದು, ದಟ್ಟ ಕಾಡಿನೊಳಗೆ ಅತೀ ವೇಗದ ಚಾಲನೆಯಂದಿಂಡಿದು ಕೆಸರಿನೊಳಗೆ ಕಲ್ಲು ಇಳಿಜಾರು ತಿರಿವಿನ ರಸ್ತೆಗಳುತುಂಬಿ ಹರಿಯುವ ನದಿಯೊಳಗೆ ವಾಹನವನ್ನು ಚಾಕಚಕ್ಯತೆಯಿಂದ ನಡೆಸಿ ಮುಂದಿನ ಹಂತವನ್ನು ನಡೆಸಬೇಕಿತ್ತು.
ಅರುಣಾಚಲಪ್ರದೇಶ, ಚಂಡಿಗಡ್, ದೆಹಲಿ, ಹೈದರ ಬಾದ್, ತೆಂಗಾಣ, ಗೋವಾ, ಕೇರಳ, ಕರ್ನಾಟಕದಿಂದ ಹಲವು ನುರಿತ ರ‍್ಯಾಲಿಪಟುಗಳು ಸೇರಿ ಆಫ್ ರೋಡ್ ರ‍್ಯಾಲಿಗೆ ಸಿದ್ದಗೊಂಡ 4*4 ನ ಒಟ್ಟು 21 ವಾಹನಗಳು ಭಾಗವಹಿಸಿದ್ದವು.
ಕೇರಳದ ಕೋಟಾಯಂನ ಆನಂದ್ ಮಂಜುರನ್ ಡ್ರೈವರ್ ಹಾಗು ಕೋಡ್ರೈವರಾಗಿ ಕೊಡಗಿನ ಉದ್ದಪಂಡ ಚೇತನ್ ಚಂಗಪ್ಪ ಜಿಪ್ಸಿಮಾಡಿಫೈಡ್ ವಾಹನದಲ್ಲಿ ಭಾಗವಹಿಸಿದ್ದರು. 2 ನೇ ಹಾಗು 3ನೇ ಹಂತದಲ್ಲಿ ಕಾಡಿನೊಳಗೆ ಅತೀವೇಗದಿಂದವಾಗಿಚಲಿಸಿದ ಪರಿಣಾಮವಾಗಿ ಇಂಜಿನ್ ನಲ್ಲಿ ದೋಷಗೊಂಡರೂ ರಾತ್ರೋರಾತ್ರಿ ಜಿಪ್ಸಿಯ ಇಂಜಿನ್ ಬದಲಿಸಿ ಮುಂದಿನ ಹಂತವನ್ನು ತಲುಪಿದರು. 10 ಹತ್ತನೇ ಹಂತದಲ್ಲಿ ತುಂಬಿದ ನದಿಯನ್ನು ದಾಟುವಾಗ ಜೀಪು ನೀರಿನೊಳಗೆ ಸಿಲುಕಿಕೊಂಡಾಗ ಕೋಡ್ರೈವರ್ ಚೇತನ್ ಚಂಗಪ್ಪ ಸಾಹಸದ ಮೂಲಕ ತಾನೇ ಜೀಪನ್ನು ಚಲಾಯಿಸಿ ನದಿಯಿಂದ ಮುನ್ನಡೆ ಸಿದರು.
17 ಹಾಗೂ 18ನೇ ಹಂತ ತಲುಪು ತಿದ್ದಂತೆ ಗೇರ್ ಬಾಕ್ಸ್ ನಲ್ಲಿ ತಾಂತ್ರಿಕದೋಷ ಗೊಂಡ ಪರಿಣಾಮ ಸುಮಾರು 3 ಕಿಮಿ ವಾಹನವನ್ನು ಹಿಮ್ಮುಖವಾಗಿ ಚಲಿಸಿ ಮುಂದಿನ ಹಂತಕ್ಕೆ ತಲುಪಿದರು. ಒಟ್ಟು 29 ಹಂತವನ್ನು ಪೂರೈಸಿದ ಆನಂದ್ ಮಂಜುರನ್ನ್ ಹಾಗೂ ಚೇತನ್ ಚಂಗಪ್ಪ ಜೋಡಿ ಓವರಾಲ್ ದ್ವಿತೀಯ ಹಾಗೂ ಕ್ಯಾಟಗರಿಯಲ್ಲಿ ದ್ವಿತೀಯ ಬಹುಮಾನ ಪಡೆದರು.
2016ರಿಂದ ಆರ್ ಎಫ್ ಸಿ ರ‍್ಯಾಲಿಯಲ್ಲಿ 6ನೇ ಬಾರಿ ಭಾಗವಹಿ ಸಿ 5 ಬಾರಿಯೂ ವಿಜೇತರಾಗಿದ್ದು, ಮೂರು ಬಾರಿ ಆರ್ ಎಫ್ ಸಿ ಯಲ್ಲೂ ಚೇತನ್ ಚಂಗಪ್ಪ ಇಂಡಿಯನ್ನ್ ಚಾಂಪಿಯನ್ ಆಗಿದ್ದರು.
ಜೆಕೆ ಟಯರ್ಸ್ ಕಂಪನಿಯ ಪ್ರಾಯೋಜಕತ್ವ ನೀಡಿದ್ದು, ಈ ಬಾರಿ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ ರೋಚಕ ಅನುಭವ ಪಡೆದಿದ್ದರೂ ಹಲವು ಹಂತದಲ್ಲಿ ಜೀಪಿನ ತಾಂತ್ರಿಕದೋಷದ ಕಾರಣ ದ್ವಿತೀಯ ಬಹುಮಾನಕ್ಕೆ ತೃಪ್ತಿ ಪಡುವಂತಾಗಿದೆಂದು ಉದ್ದಪಂಡ ಚೇತನ್ ಚಂಗಪ್ಪ ಹೇಳುತ್ತಾರೆ.
ವರದಿ – ಪುತ್ತರಿರ ಕರುಣ್ ಕಾಳಯ್ಯ








