ಮಡಿಕೇರಿ ಆ.1 : ಮಡಿಕೇರಿ ತಾಲೂಕಿನಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ತಿಳಿಸಿದ್ದಾರೆ.
ಈಗಾಗಲೇ ತಮ್ಮ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಯನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಸಂಸ್ಥೆಗಳನ್ನು ಹೊರತುಪಡಿಸಿ ನೋಂದಣಿಯಾಗದಿರುವ ಸಂಸ್ಥೆಗಳು 15 ದಿನಗಳೊಳಗೆ ಕರ್ನಾಟಕ ಸರ್ಕಾರದ ಇ-ಕಾರ್ಮಿಕ ತಂತ್ರಾಂಶದಲ್ಲಿ http://www.ekarmika.Karnataka.gov.in/ekarmika/static/home.aspx ನಿಗಧಿತ ಆನ್‍ಲೈನ್ ಮೂಲಕ ಶುಲ್ಕ ಮತ್ತು ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಂಸ್ಥೆಗಳ ನೋಂದಣಿ ಪತ್ರ ಪಡೆಯುವಂತೆ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಕೋರಿದ್ದಾರೆ.
ಹಾಗೆಯೇ ತಮ್ಮ ಸಂಸ್ಥೆಯಲ್ಲಿ ಕೆಲಸಗಾರರು ಇಲ್ಲದಿದ್ದರೂ ಸಹ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಹಾಗೂ ನಿಯಮಾವಳಿ 1963ರ ಕಲಂ.4(1) ಮತ್ತು (3) ಹಾಗೂ ನಿಯಮ 3 ರ ಮೇರೆಗೆ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳಲು ತಪ್ಪಿದ ಸಂಸ್ಥೆಯ ಮಾಲೀಕರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ತಿಳಿಸಿದ್ದಾರೆ.









