ಮಡಿಕೇರಿ ಆ.1 : ಅರಣ್ಯ ಇಲಾಖೆ ವತಿಯಿಂದ ವೈಎಂಸಿಎ ಕೂರ್ಗ್ ಸಹಕಾರದಲ್ಲಿ ಶಾಂತಿ ಚರ್ಚ್ ಆವರಣದಲ್ಲಿ ವನಮಹೋತ್ಸವ ನಡೆಯಿತು.
ಶಾಂತಿ ಚರ್ಚ್‍ನ ಗುರುಗಳಾದ ರೆವರೆಂಡ್ ಜೈಸನ್, ವೈಎಂಸಿಎ ಕೂರ್ಗ್ ಸಂಸ್ಥೆ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಗಿಡ ನೆಟ್ಟರು.
ಬಳಿಕ ಮಾತನಾಡಿದ ಅವರು ಮರ ಗಿಡಗಳನ್ನು ಹೆಚ್ಚು ಬೆಳೆಸಿ ಪರಿಸರ ಸಂರಕ್ಷಿಸಬೇಕಿದೆ. ಶುದ್ಧ ಗಾಳಿ ಮತ್ತು ನೀರು, ಸ್ವಚ್ಚ ಪರಿಸರ ಪಡೆಯಲು ಮರಗಿಡಗಳು ಅಗತ್ಯ ಎಂದು ಹೇಳಿದರು.
ವೈಎಂಸಿಎ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಅಗಸ್ತ್ಯನ್ ಜಯರಾಜ್, ಖಜಾಂಚಿ ರಿಚರ್ಡ್ ಉಲ್ಲಾಸ್, ಜಂಟಿ ಕಾರ್ಯದರ್ಶಿ ಜಾಯ್ಸ್ ಮೆನೇಜಸ್, ಶಾಮುವಲ್ ಜಯಕುಮಾರ್, ವಿನಯ್ ಜೋಯ್ಸ್ ಇತರರು ಇದ್ದರು.









