ಮಡಿಕೇರಿ ಆ.1 : ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಬಳಿಯ ಅಂಗನವಾಡಿಗೆ ಅಪಾಯವನ್ನು ಆಹ್ವಾನಿಸುತ್ತಿದ್ದ ಮೂರು ಮರಗಳನ್ನು ಕೊನೆಗೂ ಅರಣ್ಯ ಇಲಾಖೆ ತೆರವುಗೊಳಿಸಿದೆ.
ಮರಗಳಿಂದ ಅಂಗನವಾಡಿಗೆ ಅಪಾಯವಿರುವ ಬಗ್ಗೆ NEWS DESK ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಕಳೆದ ಅನೇಕ ದಿನಗಳಿಂದ ದೂರು ನೀಡಿದರೂ ಸ್ಪಂದನೆ ದೊರೆಯದೆ ಇರುವ ಬಗ್ಗೆ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. NEWS DESK ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಇಂದು ಮೂರು ಮರಗಳನ್ನು ತೆರವುಗೊಳಿಸಿತು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸಹಕಾರ ನೀಡಿದರು.










