ಸುಂಟಿಕೊಪ್ಪ ಆ.3 : ನಾಕೂರು ಶಿರಂಗಾಲ ಗ್ರಾ.ಪಂ ಯ 2 ಅವಧಿಯ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
2ನೇ ಅವಧಿಗೆ ಅಧ್ಯಕ್ಷರ ಸ್ಥಾನವನ್ನು ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನವು ಬಿಸಿಎಂ(ಎ) ಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ್ ಹಾಗೂ ಕೆ.ಎಂ.ಸುಭಾಫ್ ಸ್ಪರ್ಧಿಸಿದ್ದು, ಜಗನ್ನಾಥ್ 7 ಮತಗಳನ್ನು ಪಡೆದರೆ ಕೆ.ಎಂ.ಸುಭಾಷ್ 1 ಮತಗಳನ್ನಷ್ಟೇಗಳಿಸುವ ಮೂಲಕ ಪರಾಜಯಗೊಂಡರು.
ಅಧ್ಯಕ್ಷರಾಗಿ ಹಾಲಿ ಗ್ರಾ.ಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಪುನರಾಯ್ಕೆಯಾದರು ಹಾಗೂ ಉಪಾಧ್ಯಕ್ಷ ರಾಗಿ ಸತೀಶ್ ಅವಿರೋಧವಾಗಿ ಆಯ್ಕೆಯಾದರು.
ನಾಕೂರು ಶಿರಂಗಾಲ ಗ್ರಾ.ಪಂ ನಲ್ಲಿ 8 ಸದಸ್ಯರ ಬಲ ಹೊಂದಿದ್ದು, ಸದಸ್ಯರುಗಳಾದ ಜಗನ್ನಾಥ್, ಬಿ.ಜಿ.ರಮೇಶ್, ಕೊಳಂಬೆ ಸುಭಾಷ್, ಸತೀಶ, ಅರುಣ ಕುಮಾರಿ,ಪ್ರೇಮ,ಸೀತೆ ಹಾಗೂ ರಾಧಮಣಿ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ವರದರಾಜು ಕಾರ್ಯನಿರ್ವಹಿಸಿದ್ದರು.
ನಾಕೂರು ಶಿರಂಗಾಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ್, ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.








