ಸುಂಟಿಕೊಪ್ಪ,ಆ.3 : ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ಹಾಡಹಗಲು ಹಾಗೂ ರಾತ್ರಿಯ ವೇಳೆಯಲ್ಲಿ ಬೀದಿ ದೀಪಗಳು ಕಳೆದ 10 ದಿನಗಳಿಂದ ನಿರಂತರವಾಗಿ ಉರಿಯುತ್ತಿದ್ದು, ಸಾರ್ವಜನಿಕರು ಪಂಚಾಯಿತಿ ಹಾಗೂ ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯು ಸೆಸ್ಕ್ ಇಲಾಖೆಗೆ ಲಕ್ಷಗಟ್ಟಲೇ ಹಣ ಬಾಕಿ ಉಳಿಸಿಕೊಂಡಿದೆ. ಹಗಲಲ್ಲೂ ಬೀದಿದೀಪ ಉರಿಯುತ್ತಿರುವ ಗ್ರಾ.ಪಂ ಗಮನಕ್ಕೆ ತಂದರೂಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ತುರ್ತು ವೇಳೆಯಲ್ಲಿ ರಾತ್ರಿ ಹೊತ್ತು ಕತ್ತಲಮಯವಾಗಿರುತ್ತದೆ. ಆದರೆ ಇದೀಗ ಹಗಲು ವೇಳೆಯಲ್ಲೂ ಉರುಯುತ್ತಿರುವುದು ಗ್ರಾ.ಪಂ ಮತ್ತು ಸೆಸ್ಕ್ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಸೆಸ್ಕ್ ಕಿರಿಯ ಎಂಜಿನಿಯರ್ ಲವ ಅವರ ಗಮನಕ್ಕೆ ತಂದಾಗ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಗಮನಹರಿಸುವುದಾಗಿ ಮಾಹಿತಿ ನೀಡಿದರು.