ಮಡಿಕೇರಿ ಆ.3 : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ವತಿಯಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗಕ್ಕೆ ಸೇರಿದ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಭೂಮಿ ಖರೀದಿಸಲು ಹಾಗೂ ಭೂಮಿ ಮಾರಾಟ ಮಾಡಲು ಇಚ್ಚಿಸುವ ಪರಿಶಿಷ್ಟ ಜಾತಿ/ ಪಂಗಡ ಹೊರತುಪಡಿಸಿ, ಇತರೆ ಜನಾಂಗಕ್ಕೆ ಸೇರಿರುವ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಕೃಷಿಗೆ ಯೋಗ್ಯವಾಗಿರುವ ಕನಿಷ್ಠ 2 ಎಕರೆ ಖುಷ್ಕಿ ಅಥವಾ ಕನಿಷ್ಠ 1 ಎಕರೆ ತರಿ/ ಭಾಗಾಯ್ತು ಜಮೀನುಗಳನ್ನು ಒದಗಿಸುವುದು ಈ ಯೋಜನೆ ಅನುಷ್ಠಾನದ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಜಿದಾರರು ಕಚೇರಿಯಿಂದ ಉಚಿತವಾಗಿ ಅರ್ಜಿ ಪಡೆದು ಆಗಸ್ಟ್, 31 ರೊಳಗೆ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಜಿಲ್ಲಾ ಕಚೇರಿಗೆ ಸಲ್ಲಿಸಲು ಕೋರಿದೆ.
ಫಲಾಪೇಕ್ಷಿಯು ಸಲ್ಲಿಸಬೇಕಾದ ದಾಖಲಾತಿಗಳು : ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್‍ಕಾರ್ಡ್, ಪೋಟೋ, ಗ್ರಾಮ ಸಭೆಯ ಆಯ್ಕೆ ಪತ್ರ, ಭೂ ರಹಿತ ಕೃಷಿ ಕಾರ್ಮಿಕರ ಪತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ ಮತ್ತು ಪಾಸ್ ಪುಸ್ತಕ ಜೆರಾಕ್ಸ್.
ಭೂ ಮಾಲೀಕರು ನೀಡಬೇಕಾದ ದಾಖಲಾತಿಗಳು: ಭೂ ಮಾಲೀಕರ ಜಾತಿ ಪ್ರಮಾಣ ಪತ್ರ ಹಾಗೂ ಪೋಟೋ, ಪಹಣಿ 3 ವರ್ಷದ್ದು, ಜಮಾಬಂದಿ, ವಂಶವೃಕ್ಷ, ಚೆಕ್ಕು ಬಂದಿ, ಮ್ಯುಟೇಷನ್(ಹಕ್ಕು ಬದಲಾವಣೆ), ಆರ್‍ಆರ್.ನಂ.5 ಮತ್ತು 6, ಕಂದಾಯ ರಶೀದಿ, ಕ್ರಯ ಪತ್ರದ ನಕಲು, ಪಿತ್ರಾರ್ಜಿತವಾದಲ್ಲಿ ಸಂಬಂಧಪಟ್ಟ ಎಲ್ಲಾ ಸದಸ್ಯರ ಒಪ್ಪಿಗೆ ಪತ್ರ, ಬ್ಯಾಂಕು ಹಾಗೂ ಸೊಸೈಟಿಯಿಂದ ಸಾಲವಿಲ್ಲದ ದೃಢೀಕರಣ ಪತ್ರ, ಋಣಭಾರ ಪತ್ರ(13 ವರ್ಷದ್ದು) ಹಾಗೂ 11 ಇ ನಕ್ಷೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ನಿಯಮಿತ, ಕೊಡಗು ಜಿಲ್ಲೆ-571201 ದೂ.ಸಂ.08272-228857 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.









