ಮಡಿಕೇರಿ ಆ.4 : ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿರಾಜಪೇಟೆಯ ಶರಣ್ಯರಾವ್ ಅವರಿಗೆ ಪ್ರಶಸ್ತಿ “ಡಬಲ್”ಗೆ ಪಾತ್ರರಾಗಿದ್ದಾರೆ.
60ನೇ ವರ್ಷಾಚರಣೆಯಲ್ಲಿರುವ ಗುಜರಾತ್‍ನ ವಡೋದರಾದಲ್ಲಿರುವ ಇಎಂಇ ಶಾಲೆಯಲ್ಲಿ ಆಯೋಜಿಸಲಾಗಿದ್ದ “ಯಂಗ್ ಆಫೀಸರ್ಸ್” ತರಬೇತಿಯಲ್ಲಿ ಶರಣ್ಯರಾವ್ ಮೊದಲ ಸ್ಥಾನಿಯೂ ಆಗಿ ಹೊರಹೊಮ್ಮಿದ್ದಾರೆ.
ಭೂ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥರಾದ ಹೆಸರಿನಲ್ಲಿರುವ ಟ್ರೋಫಿ ಪದಕವನ್ನು ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಇಎಂಇ ಶಾಲಾ ಕಮಾಂಡೆಂಟ್ ಮೇ.ಜ ನೀರಜ್ ವರ್ಶಾನಿ ವಿಎಸ್‍ಎಂ ರಿಂದ ಪಡೆದುಕೊಂಡಿದ್ದಾರೆ.
ಶರಣ್ಯ ಕೂರ್ಗ್ ಗಾಲ್ಫ್ ಲಿಂಕ್ಸ್‍ನ ವ್ಯವಸ್ಥಾಪಕರಾಗಿರುವ ಹರೀಶ್‍ರಾವ್ ಎಸ್ ಹಾಗೂ ಎಸ್‍ಎಂಎಸ್ ಅಕಾಡೆಮಿಯಲ್ಲಿ ಗೈಡ್ ಕ್ಯಾಪ್ಟನ್ ಆಗಿರುವ ಮೈಥಿಲಿರಾವ್ ದಂಪತಿಯ ಪುತ್ರಿ.









