ಮಡಿಕೇರಿ ಆ. 4 : ಪರಿಸರ ನಾಶವಾದರೆ ಭವಿಷ್ಯದಲ್ಲಿ ಘೋರ ಪರಿಣಾಮ ಎದುರಿಸಬೇಕಾದೀತು. ಈ ಹಿನ್ನಲೆಯಲ್ಲಿ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಮರಗಳ ನಾಶವನ್ನು ತಡೆಗಟ್ಟುವುದು ಪ್ರತೀಯೋವ೯ ಜವಬ್ದಾರಿಯುತ ನಾಗರಿಕರ ಕತ೯ವ್ಯ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ್ ಉದಯ್ ಕರವೇಕರ್ ಹೇಳಿದ್ದಾರೆ.
ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಆಯೋಜಿತ ಪರಿಸರ ಮಹತ್ವದ ಉಪನ್ಯಾಸ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಯೂರ್ ಕರವೇಕರ್ , ವನ ಮಹೋತ್ಸವದಂಥ ಪರಿಸರ ಜಾಗ್ರತಿ ಆಚರಣೆಗಳು ವಷ೯ಕ್ಕೊಂದೇ ದಿನಕ್ಕೆ ಸೀಮಿತವಾಗದೇ ಯಾವಾಗ ಸಾಧ್ಯವಾಗುತ್ತದೋ ಆಗಾಗ್ಗೆ ಪರಿಸರ ಕಾಳಜಿಯ ನಿಟ್ಟಿನಲ್ಲಿ ಹಸಿರ ಸಸಿ ನೆಡುವಿಕೆಯಂಥ ಕಾಯ೯ಕ್ರಮಗಳು ಜರುಗಬೇಕು. ಪರಿಸರ ನಾಶ ತಡೆಯದೇ ಹೋದಲ್ಲಿ ವಿದ್ಯುತ್, ನೀರಿನಂತೆ ಗಾಳಿಗೂ ಅತ್ಯಧಿಕ ಬೆಲೆ ತೆರಬೇಕಾದೀತು.
ನಾವು ಮೊದಲು ಪರಿಸರ ರಕ್ಷಣೆಗೆ ಬದ್ದರಾಗಬೇಕು. ಬೇರೆಯವರಿಗೆ ಉಪದೇಶ ನೀಡುವಮುನ್ನ ಈ ನಿಟ್ಟಿನಲ್ಲಿ ನಾವು ಯಾವ ರೀತಿ ಕಾಳಜಿ ವಹಿಸಿರುವೆ ಎಂಬ ಆತ್ಮಾವಲೋಕನ ಮುಖ್ಯವಾಗಬೇಕು. ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರತೀ ವಷ೯ ಲಕ್ಷಾಂತರ ಹೆಕ್ಟೇರ್ ನಾಶವಾಗುತ್ತಿದೆ. ಹೀಗಾಗಿ ನಾವೀಗ ಕೈಗೊಂಡಿರುವ ಸಸಿ ನೆಡುವಿಕೆ ಪ್ರಮಾಣ ಏನೇನೂ ಸಾಲದು. ಎಂದು ಮಯೂರ್ ಅಭಿಪ್ರಾಯಪಟ್ಟರು.
ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯವನ್ನು ಪ್ರತೀಯೋವ೯ರೂ ಮನದಟ್ಟು ಮಾಡಿಕೊಳ್ಳಬೇಕು. ಪೇಪರ್ ಗ್ಲಾಸ್ ನಲ್ಲಿಯೂ ಇರುವ ರಾಸಾಯನಿಕಗಳಿಂದಲೂ ಅಪಾಯ ತಪ್ಪಿದ್ದಲ್ಲ ಎಂದೂ ಮಯೂರ್ ಎಚ್ಚರಿಸಿದರು..
ಶಿಕ್ಷಣವಂತರೇ ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿರುವುದನ್ನು ಗಮನಿಸಿದರೆ ಶಿಕ್ಷಣವಂತರ ಅಜ್ಞಾನ ನಿರೂಪಿತವಾಗುತ್ತದೆ ಎಂದು ವಿಷಾಧಿಸಿದ ಮಯೂರ್, ಭೂಮಿಯಲ್ಲಿ ಜೀವಿಸಿದ ಮೇಲೆ ನಾವು ಮಾತ್ರ ಭೂಮಿಯಿಂದ ದೊರಕುವ ಪ್ರಯೋಜನಗಳನ್ನು ಪಡೆದುಕೊಳ್ಳುವುದಲ್ಲ. ಬದಲಿಗೆ, ಈ ಭೂಮಿಗೂ ನಮ್ಮಿಂದಾಗುವ ಉಪಕಾರ ಮಾಡಬೇಕು ಎಂದು ಮಯೂರ್ ಕಿವಿಮಾತು ಹೇಳಿದರು.
ಪ್ರಕೖತ್ತಿಯನ್ನು ಚೆನ್ನಾಗಿ ನೋಡಿಕೊಂಡರೆ, ಪ್ರಕೖತ್ತಿಯೂ ನಮಗೆ ಅಮೂಲ್ಯವಾದ ಕೊಡುಗೆ ನೀಡುತ್ತದೆ. ನಾವು ಮನೆಯಲ್ಲಿ ಚಿಕ್ಕಮಕ್ಕಳನ್ನು ಕಾಳಜಿಯಿಂದ ನೋಡಿಕೊಂಡಂತೆ ಪ್ರತೀಯೋವ೯ರೂ ತಾವು ಬೆಳೆಸಿದ ಸಸಿಗಳನ್ನು ಬೆಳೆಸಿದರೆ ಅದು ಹೆಮ್ಮರವಾಗಿ ಜನರಿಗೆ ಪ್ರಯೋಜನಕಾರಿಯಾಗುತ್ತದೆ ಎಂದೂ ಮಯೂರ್ ವಿಶ್ಲೇಷಿಸಿದರು. ನಾವು ನೆಟ್ಟ ಸಸಿ ಹೆಮ್ಮರವಾಗಿ ಬೆಳೆದಾಗ ದೊರಕುವ ತೖಪ್ತಿ ವಣ೯ನಾನೀತ ಎಂದೂ ಅವರು ಹೇಳಿದರಲ್ಲದೇ, ಸಸ್ಯ ಸಂರಕ್ಷಣೆ ಎಂಬುದು ಯಾರದೋ ಒತ್ತಾಯಕ್ಕೆ ಮನಸ್ಸಿನಲ್ಲಿ ಮೂಡದೇ ನಮ್ಮ ಮನಸ್ಸಿನಿಂದಲೇ ಸಸ್ಯ ರಕ್ಷಣೆ ಬಗ್ಗೆ ಕಾಳಜಿ ಸೖಷ್ಟಿಯಾಗಬೇಕೆಂದೂ ಅವರು ಅಭಿಪ್ರಾಯ ಪಟ್ಟರು.
ಅರಣ್ಯ ಇಲಾಖೆ ನೀಡುವ ಉಪಯುಕ್ತ ಸಸಿಗಳನ್ನು ಪಡೆದುಕೊಂಡು ಸೂಕ್ತ ಜಾಗದಲ್ಲಿ ನೆಟ್ಟು, ವನಗಳ ಹೆಚ್ಚಳಕ್ಕೆ ಪ್ರತೀಯೋವ೯ರು ಕಾರಣವಾಗುವಂತೆಯೂ ಮಯೂರ್ ಕರೆ ನೀಡಿದರು.
ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾಯ೯ದಶಿ೯ ಹರೀಶ್ ಕಿಗ್ಗಾಲು, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ, ಎ.ಕೆ.ಜೀವನ್ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.