ಸೋಮವಾರಪೇಟೆ ಆ.5 : ಸೋಮವಾರಪೇಟೆ ತಾಲ್ಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ 18ರ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಔಷಧೀಯ ಗುಣಗಳುಳ್ಳ ಮಧುಬನ ಸೊಪ್ಪಿನ ಪಾಯಸವನ್ನು ಸೇವಿಸಿದರು. ಕೊಡಗಿನಲ್ಲಿ ಆಟಿ ಹಬ್ಬದ ವಿಶೇಷತೆಯ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದರು.










