ಸಿದ್ದಾಪುರ ಆ.5 : ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಪ್ರಾಥಮಿಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೂ ಸಹ ತಾಯಿ ಮಗುವಿಗೆ ಎದೆ ಹಾಲು ಕುಡಿಸುವ ಪ್ರಮಾಣ ಕಡಿಮೆ ಆಗಿದೆ. ಮಗುವಿಗೆ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕು. ಇದರಿಂದ ಶಿಶುಗಳಿಗೆ ಬರುವಂತಹ ಸೋಂಕು ರೋಗಗಳನ್ನು ತಡೆಗಟ್ಟಿ, ಶಿಶು ಮರಣಗಳನ್ನು ತಪ್ಪಿಸಬಹುದು ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಕೊಡಗು ಶಾಖೆಯ ಕುಸುಮ ಮಾತನಾಡಿ, ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಪ್ರಾರಂಭಿಸಬೇಕು. ಇದು ಮಗುವಿಗೆ ಮೊದಲಯ ಲಸಿಕೆ ಎದೆ ಹಾಲು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಸ್ತನ್ಯಪಾನದಿಂದ ಶಿಶು ಮರಣವನ್ನು ತಗ್ಗಿಸಬಹುದು ಎಂದು ಮಾಹಿತಿ ನೀಡಿದರು.








