ಸೋಮವಾರಪೇಟೆ ಆ.5 : ಹಾಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರ ಹಿಂಬಡ್ತಿ ನೀಡಿದೆ ಎಂದು ಆರೋಪಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಭಾರತ ಸೇವಾದಳದ ಕಾರ್ಯಾಗಾರವನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದರು.
1 ರಿಂದ 7ನೇ ತರಗತಿಯವರೆಗೆ ಬೋಧಿಸಲು ನೇಮಕಗೊಂಡ ಶಿಕ್ಷಕರನ್ನು ಈಗ 1 ರಿಂದ 5ನೇ ತರಗತಿಯವರೆಗೆ ಮಾತ್ರ ಬೋಧಿಸಲು ನಿಗಧಿಗೊಳಿಸಿ ಶಿಕ್ಷಕರಿಗೆ ಹಿಂಬಡ್ತಿ ನೀಡಲಾಗಿದೆ. ಮಕ್ಕಳಿಗೆ ಪಾಠ ಮಾಡುವುದು ನಮ್ಮ ಕೆಲಸ, ಬೇರೆ ಕೆಲಸಗಳನ್ನು ಶಿಕ್ಷಕರು ಮಾಡುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.
1 ರಿಂದ 7ನೇ ತರಗತಿಗೆ ನೇಮಕವಾದ ಯಾವುದೇ ಶಿಕ್ಷಕರು ಈಗ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಗಾವಣೆ ಅಸಾಧ್ಯವಾಗಿದೆ. ಹುದ್ದೆಗಳು ತನ್ನಿಂದ ತಾನೇ ಜಿಪಿಟಿ ಹುದ್ದೆಗಳಾಗಿ ಪರಿವರ್ತನೆಯಾಗಿವೆ. ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಗೆ ಸ್ಥಳಾವಕಾಶ ಸಿಗದಂತೆ ಯಾಗಿದೆ.
ಪ್ರಾಥಮಿಕ ಹಂತದಲ್ಲಿ ದೈಹಿಕ ಶಿಕ್ಷಣವನ್ನು ಒಂದು ವಿಷಯವಾಗಿ ಸೇರಿಸಿ ಪಠ್ಯ ನೀಡಿದ್ದು, ಬಹುತೇಕ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲ. ಆ ಶಿಕ್ಷಕರೆ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಲ್ಲೂ ಎಂ.ಎ. ಎಂಕಾA, ಎಂಎಸ್ಸಿ ಬಿಎಡ್ ವ್ಯಾಸಂಗ ಮಾಡಿದವರು ಇದ್ದಾರೆ. ನಮಗೆ ಮಾತ್ರ ಮಾನದಂಡಗಳನ್ನು ರೂಪಿಸಿರುವುದ ಅನ್ಯಾಯ ಎಂದು ಹೇಳಿದರು.
ನಮ್ಮ ಮನವಿಯನ್ನು ಈಗಾಗಲೇ ಶಾಸಕರು, ಜಿಲ್ಲಾಧಿಕಾರಿ, ಮತ್ತು ಜಿಲ್ಲಾ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು ದೂರಿದರು.
ಪ್ರತಿಭಟನಾ ಸಂದರ್ಭ ಪದಾಧಿಕಾರಿಗಳಾದ ಪ್ರೇಮ, ಕವಿತಾ, ಎನ್.ಎಲ್. ಸುರೇಶ್, ಎನ್.ಎಂ. ನಾಗೇಶ್ ಉಮಾದೇವಿ, ಶಿವಕುಮಾರ್, ರವಿ, ಯೋಗೇಶ್, ಆಶ, ಸೌಭಾಗ್ಯ ಮತ್ತಿತರರು ಇದ್ದರು.
Breaking News
- *ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ*
- *ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ ಚಾಂಪಿಯನ್*
- *ಮಡಿಕೇರಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ : ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಿ: ಸಿವಿಲ್ ನ್ಯಾಯಾಧೀಶೆ ಶುಭ*
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*