ಮಡಿಕೇರಿ ಆ.5 : ವಿರಾಜಪೇಟೆಯ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ಅಲಂಕರಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಗುಂಡಿಕೆರೆ ಮುಸ್ಲಿಂ ಜಮಾಹತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಜಮಾಹತ್ ಅದ್ಯಕ್ಷ ಕೆ.ಯು.ಮುಹಮ್ಮದ್ ಹಾಜಿ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಅದ್ಯಕ್ಷ ಅನಿಫ್ ಚೋಕಂಡಳ್ಳಿ , ಶಾಪೀ ಮಸೀದಿ ಗುಂಡಿಕೆರೆ ಉಪಾದ್ಯಕ್ಷ ಎಂ.ವೈ.ಆಲಿ, ಮಾಜಿ ಅಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ಸಿ.ಪಿ.ಆಲಿ, ಪ್ರದಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ಆಡಳಿತ ಮಂಡಳಿ ಸದಸ್ಯ ಅಲೀ ಮುಸ್ಲಿಯಾರ್, ತಕ್ಕಮುಖ್ಯಸ್ಥರಾದ ಶಾದುಲಿ ಎಂಪಿ.ಹಸೈನಾರ್ ಬೇಟೋಳಿ ಗ್ರಾ.ಪಂ ಸದಸ್ಯ ರಝಾಕ್ ಮತ್ತಿತರರು ಹಾಜರಿದ್ದರು.
ಕಾರ್ಯದರ್ಶಿ ಆಲಿ ಸ್ವಾಗತಿಸಿದರು. ಕೆದಮುಳ್ಳೂರು ಗ್ರಾ.ಪಂ ಸದಸ್ಯ ಎಂ.ಎಂ.ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ವಂದಿಸಿದರು.
ವರದಿ : ನೌಫಲ್ ಕಡಂಗ