ಸಿದ್ದಾಪುರ ಆ.5 : ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ತಡೆಗೋಡೆ, ರಸ್ತೆ, ಮನೆ ಕುಸಿತ ಸೇರಿದಂತೆ ಇತರೆ ಹಾನಿಯಾದ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರೆಕಾಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳ ಅಧಿಕವಾಗಿದ್ದು, ನಿವೇಶನ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಹಾಗೂ ರಸ್ತೆ ಸಮಸ್ಯೆ ಮತ್ತು ಬಸ್ ಸಂಚಾರ ಇಲ್ಲದಿರುವ ಬಗ್ಗೆ ಶಾಸಕರ ಗಮನ ಸೆಳೆದರು.
ಈ ಸಂದರ್ಭ ಶಾಸಕ ಮಂತರ್ ಗೌಡ ಮಾತನಾಡಿ ಗ್ರಾಮೀಣ ಭಾಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ನೇರವಾಗಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯಾಗಿರುವ ಪ್ರದೇಶಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಕೂಡಲೇ ಸರ್ಕಾರದ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಮಳೆಯ ಸಂದರ್ಭದಲ್ಲಿ ಜನರು ಯಾವುದೇ ಸಮಸ್ಯೆ ಹೆದರಿಸದಂತೆ ತಕ್ಷಣ ತುರ್ತು ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭ ವ್ಯಕ್ತಿಯೊಬ್ಬರು ಅನಾರೋಗ್ಕೊಳಗಾಗಿ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಶಾಸಕರು ನೇರವಾಗಿ ಅವರ ಮನೆಗೆ ತೆರಳಿ ವೈಯಕ್ತಿಕ ಸಹಾಯ ನೀಡಿ ಸೂಕ್ತ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ, ವಲಯ ಕಾಂಗ್ರೆಸ್ ಅಧ್ಯಕ್ಷ ಸದಾ ಡೆನ್ನಿಸ್, ಚಂದನ್, ಯಶ್, ಯೂಸುಫ್,ಇಸ್ಮಾಯಿಲ್, ನಂದ, ಸುಭಾಷ್, ಮತಿತರು ಹಾಜರಿದ್ದರು.