ಮಡಿಕೇರಿ ಆ.5 : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪೊನ್ನಣ್ಣ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅವರು, ಮಡಿಕೇರಿ ಕೊಡವ ಸಮಾಜದ ನವೀಕರಣ ಕಾರ್ಯಕ್ಕೆ ಸಕರಾತ್ಮಕ ವಾಗಿ ಸ್ಪಂದಿಸುತ್ತೇನೆಂದು ತಿಳಿಸಿದರು.
ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಕನ್ನಂಡ ಕವಿತಬೊಳ್ಳಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಮೂವೆರ ಕೆ.ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡಿರ ಸದಾಮುದ್ದಪ್ಪ, ಕಾಂಡೆರ ಲಲ್ಲುಕುಟ್ಟಪ್ಪ ಹಾಗೂ ಸದಸ್ಯರುಗಳಾದ ಚೊಟ್ಟೆಯಂಡ ಸಂಜುಕಾವೇರಪ್ಪ, ಪಾಲೆಯಂಡ ಸುಬ್ಬಯ್ಯ, ಪಾಲೆಯಂಡ ರೂಪಸುಬ್ಬಯ್ಯ, ಉಳ್ಳಿಯಡ ಸಚಿತ ನಂಜಪ್ಪ, ಹಾಜರಿದ್ದರು.