ಮಡಿಕೇರಿ ಆ. 5 : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾಥಿ೯ಗಳಿಗೆ ನೋಟ್ ಬುಕ್, ಟಾಪ೯ಲ್, ಮಾಸ್ಕ್, ಕಿಟ್ ಗಳನ್ನು ನೀಡಲಾಯಿತು.
ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಶಿಕ್ಷಣ ಸಂಸ್ಥೆಯ ಅಹ೯ ವಿದ್ಯಾಥಿ೯ಗಳಿಗೆ ಮಳೆಗಾದಲ್ಲಿ ಮನೆಗೆ ಹೊದಿಸಲು ಟಾಪ೯ಲ್, ಆಥಿ೯ಕ ಸಮಸ್ಯೆಯಲ್ಲಿರುವ ವಿದ್ಯಾಥಿ೯ಗಳಿಗೆ ನೋಟ್ ಬುಕ್, ಪಾತ್ರೆ ಪರಿಕರಗಳ ಕಿಟ್ ವಿತರಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾಥಿ೯ಗಳಿಗೂ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್ ಗಳನ್ನೂ ನೀಡಲಾಯಿತು.
ಈ ಸಂದಭ೯ ಮಾತನಾಡಿದ ರವೀಂದ್ರರೈ, ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕ ಸೇವಾ ಸಂಸ್ಥೆಯಾಗಿ ಮನ್ನಣೆ ಪಡೆದಿದ್ದು, ಸಮರ ಸಂದಭ೯ದಲ್ಲಿ ಯುದ್ದ ನಿರತ ದೇಶಗಳ ಜನತೆಗೆ ಆರೋಗ್ಯ ನೆರವಿಗೆ ಮುಂದಾಗುವುದಲ್ಲದೇ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೂ ಮುಂದಾಗುತ್ತದೆ. ರೆಡ್ ಕ್ರಾಸ್ ಗೆ ಭಾರತದಲ್ಲಿ 100 ವಷ೯ಗಳಿಗೂ ಮೀರಿದ ಇತಿಹಾಸವಿದೆ ಎಂದು ರೆಡ್ ಕ್ರಾಸ್ ಕಾಯ೯ಚಟುವಟಿಕೆಗಳ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆಯಲ್ಲಿ ರೆಡ್ ಕ್ರಾಸ್ ನ ವಿದ್ಯಾಥಿ೯ ಘಟಕ ಪ್ರಾರಂಭಿಸುವ ನಿಟ್ಟಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಜಿಲ್ಲಾ ನಿದೇ೯ಶಕ ಎಂ.ಧನಂಜಯ್ ಮಾಹಿತಿ ನೀಡಿದರು. ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ನಿದೇ೯ಶಕ ಕೆ.ವಸಂತ್ ಕುಮಾರ್, ಶ್ರೀಮತಿ ಡಿ.ಚೆನ್ನಮ್ಮ ಪ.ಪೂ.ಕಾಲೇಜು ಪ್ರಾಂಶುಪಾಲ ಸಿ.ಮಂದಪ್ಪ, ಶಿಕ್ಷಕ ವೖಂದದವರು ಹಾಜರಿದ್ದರು.