ಮಡಿಕೇರಿ ಆ.6 : ಸಾಹಿತಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಅವರು ಬರೆದ ಹನಿಗವನಗಳ ಸಂಕಲನ ‘ಧ್ಯಾನಕ್ಕೆ ಬಿದ್ದ ಅಕ್ಷರಗಳು’ ಕೃತಿ ಬಿಡುಗಡೆಗೊಂಡಿತು. ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅನಂತಶಯನ, ಗಂಧವನ್ನು ತಿಕ್ಕಿದಷ್ಟು ಸುಗಂಧ ಹರಡುತ್ತದೆ. ಅದೇ ರೀತಿ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಕವಿಯಾದರೆ ಸುಂದರವಾದ ಕವನ ಹುಟ್ಟುತ್ತೆ. ಕೆಲವರು ಬರೆದಾಗ ಅದರಲ್ಲಿ ಸಂದೇಶ ಇರಲ್ಲ. ಚಂದಕಾಣುತ್ತದೆ ಅಷ್ಟೆ. ಅಂತಹ ಬರಗಾರರು ಹೆಚ್ಚಿದ್ದಾರೆ. ಆದರೆ ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ಬರವಣಿಗೆಯಲ್ಲಿ ಆಸಕ್ತಿ ಉಳ್ಳವರು ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ತಾರೆ. ಏಕಾಂಗಿಯಾಗಿದ್ದಾಗ ನಮ್ಮ ಪ್ರತಿಭೆ ತೆರೆದುಕೊಳ್ಳುತ್ತದೆ, ಬೇರೆಯವರೊಂದಿಗೆ ಬೆರೆತಾಗ ಮನಸ್ಸು ಚಂಚಲವಾಗುತ್ತದೆ. ನಮ್ಮೊಳಗಿನ ಚಿಂತನೆ ಅಕ್ಷರರೂಪ ಪಡೆದುಕೊಳ್ಳುತ್ತದೆ, ಮಿಲನಾ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಮಾರುತಿ ದಾಸಣ್ಣವರ್ ಕವಿ ಕಾಣದನ್ನು ಕಲಾವಿದ ಕಾಣಬಲ್ಲ. ಕವಿಗೆ ವರ್ಣಿಸಲು ಅಕ್ಷರಗಳಿವೆ. ಆದ್ರೆಕಲಾವಿದ ಆಂಗಿಕ ಕಲೆಯ ಮುಖಾಂತರವೇತನ್ನ ಭಾವನೆಗಳನ್ನು ಹೇಳಬೇಕಾಗುತ್ತದೆ. ಸಂವೇದನಾ ಶೀಲ ಕವಯತ್ರಿ, ಕಲಾವಿದೆಯಾಗಿ ದಿಟ್ಟತನದಿಂದ ವಿಚಾರಗಳನ್ನು ಪ್ರಸ್ತುತಪಡಿಸುವ ವ್ಯಕ್ತಿ ಮಿಲನಾ ಭರತ್. ಸಾಹಿತ್ಯಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಮತ್ತಷ್ಟು ಕೃತಿಗಳನ್ನು ಹೊರತರಲು ಮುಂದಾಗಬೇಕೆAದು ಹೇಳಿದರು.
ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಕಾಜೂರು ಸತೀಶ್, ನೃತ್ಯ ಮತ್ತು ಕಾವ್ಯ ಒಂದಾಗುವುದು ಧ್ಯಾನದಿಂದ. ಇವೆರಡೂ ಈ ಕೃತಿಯಲ್ಲಿದೆ. ಹೆಣ್ಣೆಂದರೇನು, ಪೌರಾಣಿಕ ಮತ್ತು ಚಾರಿತ್ರಿಕವಾಗಿ ನೊಂದಿರುವ ಪಾತ್ರಗಳು, ರಾಮ, ಸೀತಾ, ಹೆಣ್ಣು ಗಂಡಿನ ನಡುವಿನ ಸಾಮರಸ್ಯ, ಪರಮಪ್ರೇಮ, ನಿಷ್ಕಾಮ, ಹಲವು ಮಾದರಿಯ ಕವಿತೆಗಳು ಪುಸ್ತಕದಲ್ಲಿದೆ ಎಂದು ವಿವರಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮೈಸೂರಿನ ಅಮೃತ ವಿವಿ ದೃಶ್ಯ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆಡಾ. ಬಾಲಾಡಿ ಮೌಲ್ಯ ಮಾತನಾಡಿ, ಹೆಣ್ಣಿಗೆ ನೋವು, ಸವಾಲುಗಳು ಇಲ್ಲದೇ ಇದ್ದಿದ್ದರೆ ಇಷ್ಟೊಂದು ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕವನಗಳು ಮೂಡಿ ಬರಲು ಸಾಧ್ಯವಾಗುತ್ತಿರಲಿಲ್ಲ. 2022ರ ಸಮೀಕ್ಷೆಯಂತೆ ದೇಶದಲ್ಲಿ ಶೇ.48.5 ಮಹಿಳೆಯರಿದ್ದಾರೆ. ದೇಶದಲ್ಲಿ ಪರಿಸ್ಥಿತಿ ಬದಲಾಗಿದೆ. ಭ್ರೂಣ ಹತ್ಯೆ ನಿಂತಿದೆ. 2021 ರಲ್ಲಿ ಮಹಿಳಾ ಜನಸಂಖ್ಯೆ ಹೆಚ್ಚಾಗಲು ಶುರುವಾಯ್ತು. 2021ರಲ್ಲಿ ಶೇ.90.95 ಜನ ಅಕ್ಷರಸ್ಥರಾಗ್ತಿದ್ದಾರೆ ಎಂದರು.
ಆದರೂ ಮಹಿಳೆಯರ ಮೇಲೆ ಮಾನಸಿಕ, ದೈಹಿಕ, ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತಿದೆ. 2011ರ ಅಪರಾಧ ಸಮೀಕ್ಷೆಯಂತೆ 2,28,600, 2021ರಲ್ಲಿ 4,48,278 ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ದಾಖಲಾಗಿದೆ. ದೆಹಲಿಯಲ್ಲಿ ನಡೆದ ಹೇಯ ಕೃತ್ಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ನಿರಂತರವಾಗಿ ಅಂತಹ ಪ್ರಕರಣಗಳು ಹೆಚ್ಚತೊಡಗಿತು.
ಬ್ರೇಕಿಂಗ್ ನ್ಯೂಸ್ ಮೂಲಕ ಸಂಭ್ರಮಿಸುವ ಕೆಲಸ ಮಾಡಬಾರದು. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಮಕ್ಕಳಿಗೆ ಮನೆಯಲ್ಲೇ ಉತ್ತಮ ಸಂಸ್ಕೃತಿಯನ್ನು ಕಲಿಸಿಕೊಟ್ಟರೆ ಪ್ರಪಂಚದಲ್ಲಿ ಅಸಹಜ, ಪೈಶಾಚಿಕ ಘಟನೆಗಳನ್ನು ನಿಯಂತ್ರಿಸಲು ಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಆರೋಗ್ಯಕರ ಮಾಹಿತಿಗಳು ಮಾತ್ರ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತರಾದವರ ಸಂಖ್ಯೆ ಕಡಿಮೆ ಇದೆ. ಕ್ಲಬ್‌ನ ಬೆಳ್ಳಿ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಾಹಿತ್ಯ ಕಾರ್ಯಕ್ರಮಗಳಿಗೂ ಅವಕಾಶ ನೀಡಿದ್ದೇವೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾರೈ, ಅಭಿನಯ ಕಲಾ ಮಿಲನ ಕೊಡಗು ಸಂಸ್ಥೆಯ ಟ್ರಸ್ಟಿ ಕುದುಕುಳಿ ಜೆ.ಭರತ್ ಮಾತನಾಡಿದರು. ಯುವ ಕಲಾವಿದೆ ಭಾಗಮಂಡಲದ ಸ್ಫೂರ್ತಿ ಉಷಾ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಕಲಾವಿದ ಲೋಕೇಶ್ ಊರುಬೈಲು ಮಿಲನಾ ಭರತ್‌ಅವರ ಕವನ ವಾಚನ ಮಾಡಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕ ಮಾತನಾಡಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿನಿ ಸ್ನೇಹ ಪ್ರಾರ್ಥಿಸಿದರು. ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿದರು. ಕೆದಂಬಾಡಿ ಕಾಂಚನಾ ವಿಶೇಷ ಆಹ್ವಾನಿತರ ಪರಿಚಯ ಮಾಡಿದರು, ಲೇಖಕಿ ಮಿಲನಾ ಭರತ್ ವಂದಿಸಿದರು.
Breaking News
- *ಪ್ರತೀ ಜಿಲ್ಲೆಯಲ್ಲೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ : ಸಿ.ಎಂ ಘೋಷಣೆ*
- *ಖೋ ಖೋ ವಿಶ್ವಕಪ್ : ರಾಜ್ಯದ ಇಬ್ಬರು ಆಟಗಾರರಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ*
- *ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ*
- *ರೈಲ್ವೆ ಇಲಾಖೆಯ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*
- *ಭಾಗಮಂಡಲ ಗ್ರಾ.ಪಂ ವತಿಯಿಂದ ಅಂಗನವಾಡಿಗಳಿಗೆ ಕೊಡುಗೆ*
- *ಗಣರಾಜ್ಯೋತ್ಸವದಂದು ಸಿಎನ್ಸಿಯಿಂದ ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆ : ಹಲವು ವಿಚಾರ ಕುರಿತು ಚರ್ಚೆ*
- *ರಾಜಾಸೀಟು ಉದ್ಯಾನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ : ಶಾಸಕ ಡಾ.ಮಂತರ್ ಗೌಡ ಉದ್ಘಾಟನೆ*
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*