ಮಡಿಕೇರಿ ಆ.6 : ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯಿದೆ ಮಂಡಿಸುವ ಮೂಲಕ ವಕೀಲರ ಬಹಕಾಲದ ಬೇಡಿಕೆ ಈಡೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಲಯನ್ಸ್ ಸಭಾಂಗಣದಲ್ಲಿ ಜರುಗಿದ ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎ.ಎಸ್.ಪೊನ್ನಣ್ಣ, ಅನೇಕ ರಾಜ್ಯಗಳಲ್ಲಿ ಈಗಾಗಲೇ ವಕೀಲರ ಭದ್ರತೆಗಾಗಿ ರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಈ ಕಾಯಿದೆ ಜಾರಿಗೆ ಅನೇಕ ವರ್ಷಗಳಿಂದ ವಕೀಲ ಸಮುದಾಯದ ಒತ್ತಾಯವಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊoದಿಗೆ ಚರ್ಚಿಸಿ ಕಾಯಿದೆಗೆ ಅಂತಿಮ ರೂಪು ನೀಡಲಾಗಿದ್ದು ಮುಂದಿನ ಅದಿವೇಶನದಲ್ಲಿ ಕಾಯಿದೆ ಮಂಡಿಸಿ ಜಾರಿಗೊಳಿಸಲಾಗುತ್ತದೆ. ಆ ಮೂಲಕ ವೈದ್ಯರಂತೆಯೇ ವಕೀಲರ ಸುರಕ್ಷತೆಗೆ ಕೂಡ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ನ್ಯಾಯವಾದಿಗಳು ತಮ್ಮ ಘನತೆ ಉಳಿಸಿಕೊಂಡಾಗ ಮಾತ್ರ ನ್ಯಾಯಾಂಗದ ಘನತೆ ಉಳಿಯುತ್ತದೆ ಎಂದು ವ್ಯಾಖ್ಯಾನಿಸಿದ ಪೊನ್ನಣ್ಣ, ವಕೀಲ ವೃತ್ತಿಯು ಸಮಾಜದಲ್ಲಿ ಅತ್ಯಂತ ಗೌರವದ ವೃತ್ತಿಯಾಗಿದ್ದು, ಇದರ ಘನತೆಗೆ ಎಂದೂ ಕುಂದುಂಟಾಗದಂತೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಎಷ್ಟೇ ಉನ್ನತ ಹುದ್ದೆಗೆ ಹೋದರೂ ವಕೀಲನಾದವನು ತಾನೋರ್ವ ವಕೀಲನಾಗಿದ್ದೆ ಎಂಬುವುದನ್ನು ಮರೆಯಬಾರದು. ವಕೀಲನಾಗಿ ದೊರಕುವ ಗೌರವಕ್ಕಿಂತ ಬೇರೊಂದು ಗೌರವ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧಿಕಾರಕ್ಕಾಗಿ ಎಂದಿಗೂ ಲಾಬಿ ಮಾಡದ ನಾನು ಚುನಾವಣೆಗೆ ಸ್ಪರ್ಧಿಸಲು ಕೂಡ ಪಕ್ಷದ ವರಿಷ್ಠರ ಬಳಿ ಅಂಗಲಾಚಲಿಲ್ಲ. ಅಂತೆಯೇ ಶಾಸಕನಾಗಿ ಆಯ್ಕೆಯಾದ ಬಳಿಕವೂ ಕಾನೂನು ಸಲಹೆಗಾರನನ್ನಾಗಿ ಮಾಡಿ ಎಂದು ಕೋರಲಿಲ್ಲ. ಆದರೆ ವಕೀಲ ವೃತ್ತಿಯಲ್ಲಿನ ಖ್ಯಾತಿಯಿಂದಾಗಿ ಮುಖ್ಯಮಂತ್ರಿಗಳ ಸಲಹೆಗಾರನನ್ನಾಗಿ ನೇಮಕ ಮಾಡಲಾಯಿತು ಎಂದು ಪೊನ್ನಣ್ಣ ಹೇಳಿದರು.
ವಿಧಾನಮಂಡಲದಲ್ಲಿಯೇ ಇದೀಗ ಶಾಸಕನಾಗಿ ಆಯ್ಕೆಯಾದ ಕಿರಿಯ ವಕೀಲ ಎಂಬ ಹೆಗ್ಗಳಿಕೆ ತನ್ನದಾಗಿದ್ದು, ಜನಪ್ರತಿನಿಧಿಯಾಗಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವೆ ಎಂದರು.
ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಹೆಚ್ಚು ಮಂದಿ ವಕೀಲರು ಶಾಸಕರಾಗಿ ಆಯ್ಕೆಯಾಗಬೇಕು. ವಕೀಲರು ಕೂಡ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ತೋರಬೇಕು ಎಂದು ಪೊನ್ನಣ್ಣ ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಮಡಿಕೇರಿ ನ್ಯಾಯಾಲಯದ ಹೊಸ ಸಂಕೀರ್ಣ ಸಾಕಷ್ಟು ಸಮಸ್ಯೆಗಳಿಂದ ಕೂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ನ್ಯಾಯಾಲಯಕ್ಕೆ ತೆರಳುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವೆ. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಸಿಬ್ಬಂದಿಗಳ ಅಗತ್ಯಕ್ಕೆ ತಕ್ಕಂತೆ ಮಡಿಕೇರಿಯಿಂದ ಮಿನಿ ಬಸ್ ಸಂಚಾರಕ್ಕೆ ಕೂಡ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಯಾವುದೇ ವೃತ್ತಿಯಾದರು ಆತ್ಮತೃಪ್ತಿ ಅತ್ಯಂತ ಮುಖ್ಯವಾಗಿದೆ. ರಾಜಕೀಯದಲ್ಲಿ ಬೇರೆಯವರ ಸೇವೆ ಮೂಲಕ ಈ ಆತ್ಮ ತೃಪ್ತಿ ದೊರಕುತ್ತದೆ. ವೈದ್ಯ ಮತ್ತು ವಕೀಲ ವೃತ್ತಿಗಳೆರಡೂ ಸಮಾಜದಲ್ಲಿ ಘನತೆ ಹಾಗೂ ವಿಶ್ವಸಾರ್ಹ ವೃತ್ತಿಗಳಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾನೂನಿನ ಚೌಕಟ್ಟಿನಲ್ಲಿಯೇ ತಾನು ಜನಸೇವೆಯನ್ನು ಶಾಸಕನಾಗಿ ಮುಂದುವರೆಸುವೆ, ಕಾನೂನು ಮೀರಿದರೆ ವಕೀಲರಾದವರು ತನ್ನನ್ನು ಎಚ್ಚರಿಸುವ ಕೆಲಸ ಮಾಡಲು ಸ್ವಾತಂತ್ರö್ಯವಿದೆ ಎಂದು ಡಾ.ಮಂಥರ್ ಗೌಡ ಹೇಳಿದರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ತಾನು ವಕೀಲ ವೃತ್ತಿಯಲ್ಲಿಯೇ ಮುಂದುವರೆಯುವ ಅಭಿಲಾಷೆ ಹೊಂದಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ವಕೀಲ ವೃತ್ತಿಯಲ್ಲಿ ಸಕ್ರಿಯಳಾಗಿ ಇದ್ದದ್ದು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆಯಲು ನೆರವಾಯಿತು ಎಂದು ಸ್ಮರಿಸಿಕೊಂಡರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಕೊಡಗಿನ ಇಬ್ಬರೂ ನೂತನ ಶಾಸಕರು ಯುವಕರಾಗಿದ್ದು ರಾಜಕೀಯ ಬೆಳವಣಿಗೆಗಳನ್ನು ಮತ್ತು ಅಧಿಕಾರವನ್ನು ಮನೆಯಲ್ಲಿಯೇ ಗಮನಿಸುತ್ತಾ ಬೆಳೆದ ರಾಜಕೀಯ ಮುಖಂಡರ ಕುಡಿಗಳು. ಇದೀಗ ಸ್ವಂತ ಸಾಮರ್ಥ್ಯದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗುವ ಮೂಲಕ ದೊಡ್ಡ ಹುದ್ದೆಯನ್ನು ವೃತ್ತಿ ಕಾರಣದಿಂದಾಗಿ ಅಲಂಕರಿಸಿದ್ದಾರೆ. ವೈದ್ಯರಾಗಿದ್ದ ಮಂಥರ್ ಗೌಡ ಇದೀಗ ಸಮಾಜದಲ್ಲಿನ ಸಮಸ್ಯೆಗಳ ಕಾಯಿಲೆ ವಾಸಿ ಮಾಡಲು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ಲೇಷಿಸಿದರು. ಮಡಿಕೇರಿ ನ್ಯಾಯಾಲಯ ಸಂಕೀರ್ಣದಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಶಾಸಕದ್ವಯರು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆಯೂ ನಿರಂಜನ್ ಕೋರಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂಥರ್ ಗೌಡ ಅವರನ್ನು ಈ ಸಂದರ್ಭ ಮಡಿಕೇರಿ ವಕೀಲರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಖಜಾಂಜಿ ಜಿ.ಆರ್.ರವಿಶಂಕರ್ ವೇದಿಕೆಯಲ್ಲಿದ್ದರು. ಸೌಭಾಗ್ಯ ಪೊನ್ನಪ್ಪ ಸೇರಿದಂತೆ ಸಂಘದ ಅನೇಕ ಹಿರಿಯ, ಕಿರಿಯ ವಕೀಲರು, ಸದಸ್ಯರು ಉಪಸ್ಥಿತರಿದ್ದರು.
Breaking News
- *ಪ್ರತೀ ಜಿಲ್ಲೆಯಲ್ಲೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ : ಸಿ.ಎಂ ಘೋಷಣೆ*
- *ಖೋ ಖೋ ವಿಶ್ವಕಪ್ : ರಾಜ್ಯದ ಇಬ್ಬರು ಆಟಗಾರರಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ*
- *ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ*
- *ರೈಲ್ವೆ ಇಲಾಖೆಯ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*
- *ಭಾಗಮಂಡಲ ಗ್ರಾ.ಪಂ ವತಿಯಿಂದ ಅಂಗನವಾಡಿಗಳಿಗೆ ಕೊಡುಗೆ*
- *ಗಣರಾಜ್ಯೋತ್ಸವದಂದು ಸಿಎನ್ಸಿಯಿಂದ ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆ : ಹಲವು ವಿಚಾರ ಕುರಿತು ಚರ್ಚೆ*
- *ರಾಜಾಸೀಟು ಉದ್ಯಾನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ : ಶಾಸಕ ಡಾ.ಮಂತರ್ ಗೌಡ ಉದ್ಘಾಟನೆ*
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*