ಮಡಿಕೇರಿ ಆ.6 : ನಾನು ಶಾಸಕನಾಗಲು ಯೋಚನೆ ಮಾಡಿದ್ದೇ ಒಂದು ಸವಾಲಿನಿಂದಾಗಿ. ಮನೆಯಲ್ಲಿ ತಂದೆಯವರಾದ ಎ.ಮಂಜು ಸಚಿವರಾಗಿದ್ದರು. ಈ ಸಂದರ್ಭ ನನಗೂ ಅವರಿಗೂ ಬಹಳ ಆಸಕ್ತಿದಾಯಕವಾದ ಚರ್ಚೆಗಳಾಗುತ್ತಿದ್ದವು. ಒಂದು ಹಂತದಲ್ಲಿ ನಿಮಗಿಂತ ಉತ್ತಮವಾಗಿ ಅಧಿಕಾರ ನಿರ್ವಹಿಸುವೆ ಎಂದು ಚಾಲೆಂಜ್ ಮಾಡಿ ರಾಜಕೀಯ ಕ್ಷೇತ್ರಕ್ಕೆ ಬಂದೆ.
ಹಾಸನದಿಂದ ಸ್ಪರ್ಧಿಸಲು ಚಿಂತಿಸುತ್ತಿದ್ದಾಗ ಎ.ಎಸ್.ಪೊನ್ನಣ್ಣ ಅವರು ವಿಧಾನ ಪರಿಷತ್ ಚುನಾವಣೆಗೆ ಕೊಡಗಿನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದರು. ಅಂತೆಯೇ ಇಲ್ಲಿ ಬಂದೆ, ಅಲ್ಪಮತಗಳ ಅಂತರದಲ್ಲಿ ಸೋಲು ಕಂಡೆ. ಆದರೂ ಛಲ ಬಿಡದೆ ಆನಂತರದ ದಿನಗಳಲ್ಲಿ ಸರಿ ಸುಮಾರು 15 ತಿಂಗಳು ಮಡಿಕೇರಿ ಕ್ಷೇತ್ರದಲ್ಲಿಯೇ ಜನರೊಂದಿಗೆ ಬೆರೆಯುತ್ತಾ ಹೋದೆ. ಪೊನ್ನಣ್ಣ ಅವರು ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ದೊರಕುವಲ್ಲಿ ಕಾರಣರಾದರು. ಜನರೊಂದಿಗೆ ವಿಶ್ವಾಸದಿಂದ ಇದ್ದದ್ದು ನಾನು ಶಾಸಕನಾಗಿ ಆಯ್ಕೆಯಾಗಲು ನೆರವಾಯಿತು. (ವಕೀಲರ ಸಂಘದ ಕಾರ್ಯಕ್ರಮದಲ್ಲಿ ಡಾ.ಮಂಥರ್ ಗೌಡ, ಮಡಿಕೇರಿ ಕ್ಷೇತ್ರದ ಶಾಸಕರು)











