ಮಡಿಕೇರಿ ಆ.6 : 2018 ರಲ್ಲಿ ಅಂದಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನನಗೆ ನ್ಯಾಯಾಧೀಶನಾಗುವಂತೆ ಆಹ್ವಾನ ನೀಡಿದರು. ಪ್ರಾರಂಭದಲ್ಲಿ ಹಿಂಜರಿದೆನಾದರೂ ಅಜ್ಜಿಕುಟ್ಟೀರ ಜಸ್ಟೀಸ್ ಬೋಪಣ್ಣ ಅವರ ಸಲಹೆ ಮೇರೆಗೆ ನ್ಯಾಯಾಧೀಶನಾಗಲು ಸಮ್ಮತಿ ಸೂಚಿಸಿ ಅದಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. 44 ವರ್ಷದವನಾಗಿದ್ದ ನಾನು ಇನ್ನೇನು ಕನಾ9ಟಕದ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನ್ಯಾಯಾಧೀಶನಾಗುವ ಹಂತದಲ್ಲಿದ್ದೆ. ಆದರೆ ಕೊನೇ ಕ್ಷಣದಲ್ಲಿ ಯಾವುದೇ ಕಾರಣಗಳಿಲ್ಲದೆ ನನಗೆ ಅವಕಾಶ ತಪ್ಪಿಹೋಯಿತು. ಹೀಗಾಗಿ ಮತ್ತೆ ವಕೀಲ ವೃತ್ತಿಯಲ್ಲಿಯೇ ಮುಂದುವರೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಶಾಸಕನಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರನಾಗಿ ನೇಮಕಗೊಂಡೆ. ನ್ಯಾಯಾಧೀಶನಾಗಲಿಲ್ಲ ಎಂದು ನಾನು ಯಾವತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಯಾವುದನ್ನೂ ಕೇಳದೆ ನನಗೆ ಉತ್ತಮ ಸ್ಥಾನಗಳು ದೊರಕುತ್ತಾ ಬಂದಿದೆ. ಹೀಗಾಗಿ ತಪ್ಪಿಹೋದ ಅವಕಾಶಗಳ ಬಗ್ಗೆ ಚಿಂತೆ ಮಾಡಿಲ್ಲ. (ವಕೀಲರ ಸಂಘದ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ)










