ಮಡಿಕೇರಿ ಆ.7 : ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘ ಸಿಐಟಿಯು ಸಂಯೋಜಿತ ಜಿಲ್ಲಾ ಮಟ್ಟದ ವಿಶೇಷ ಸಭೆ ಮಡಿಕೇರಿ ಬಾಲ ಭವನದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಪಿ.ಆರ್ ಭರತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಸರಕಾರದ ಜೊತೆ ನಡೆಸಿರುವ ಚರ್ಚೆಯ ಬಗ್ಗೆ ಪ್ರಸ್ತಾಪಿಸಲಾಯಿತು.
ಸಿ ಐ ಟಿ ಯು ರಾಜ್ಯಾಧ್ಯಕ್ಷರಾಗಿ, ಪ್ರದಾನ ಕಾರ್ಯದರ್ಶಿಯಾಗಿ ಹೆಚ್ಚು ಕಾಲ ಸಲ್ಲಿಸಿದ ದಿವಂಗತ ವಿ.ಪಿ.ಕುಲಕರ್ಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿ.ಪಿ.ಕುಲಕರ್ಣಿ ಅವರ ಸೇವೆ ಗ್ರಾ.ಪಂ ನೌಕರರಿಗೆ ಸರ್ಕಾರದಿಂದ ಕೊಡಿಸಿದ ಅನುಕೂಲಗಳ ಬಗ್ಗೆ ಹಲವಾರು ವಿಷಯವನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಪ್ರಸ್ತಾಪಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎಂ.ಎಸ್. ಮಹದೇವ್, ವಿದ್ಯಾ ಶ್ರೇಯಸ್, ಹಾಸಿಫ್ ವೇಣು, ಖಜಾಂಚಿ ವಸಂತ್, ಹಾಗೂ ಇತರರು ಹಾಜರಿದ್ದರು.