ಸುಂಟಿಕೊಪ್ಪ, ಆ.7 : ಮೂಲತಃ ಸುಂಟಿಕೊಪ್ಪದವರಾದ ಪ್ರಸ್ತುತ ಬೆಂಗಳೂರಿನ ರೇವ ಯೂನಿವರ್ ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಮಂಥನ್ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಇಂಟರ್ ಡೈರಕ್ಟರೇಟ್ ಶೂಟಿಂಗ್ ತರಬೇತಿ ವತಿಯಿಂದ ಕೇರಳದ ಪಟ್ಟಿವೂರ್ ಕಾವ್ ಎಂಬಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಮಂಥನ್ ಈ ಸಾಧನೆ ಮಾಡಿದ್ದಾರೆ.
ಸುಂಟಿಕೊಪ್ಪ ನಿವಾಸಿಗಳಾದ ಟಿ.ಜಿ.ಅಶ್ವಥ್ ಹಾಗೂ ಜ್ಯೋತಿ ಅವರ ಪುತ್ರ ಮಂಥನ್ ಅವರು ರೇವ ಯೂನಿವರ್‍ಸೀಟಿಯಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಪೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮಂಥನ್ ಸಾಧನೆಯನ್ನು ಕರ್ನಾಟಕ ರಾಜ್ಯಪಾಲರಾದ ತಾವರಚೆಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ.