ಮಡಿಕೇರಿ ಆ.8 : ಕೊಡಗು ಪ್ರೆಸ್ ಕ್ಲಬ್, ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಆ.14 ರಂದು “ಕದನ ಕಲಿಗಳಿಗೆ ಗೌರವ” ಕಾರ್ಯಕ್ರಮ ನಡೆಯಲಿದೆ.
ಅಂದು ಪೂರ್ವಾಹ್ನ 11 ಗಂಟೆಗೆ ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ರೆಡ್‍ಬ್ರಿಕ್ಸ್ ಇನ್‍ನ ಸತ್ಕಾರ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಏರ್ ಮಾರ್ಷಲ್ ನಂದ ಕಾರ್ಯಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಷ್ಟ್ರಪತಿಗಳ ಗೌರವ ಚಿಕಿತ್ಸಕರು, ಆಸ್ಪತ್ರೆ ಸೇವಾ ವಿಭಾಗ ಮತ್ತು ಮುಖ್ಯ ಸಮಾಲೋಚಕರು, ಮಾಜಿ ಮಹಾ ನಿರ್ದೇಶಕರಾದ ಲೆ/ಜ/ ಡಾ. ಬಿ.ಎನ್ ಬಿ.ಎಂ.ಪ್ರಸಾದ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ, ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ, “ಕದನ ಕಲಿಗಳಿಗೆ ಗೌರವ” ಕಾರ್ಯಕ್ರಮದ ಸಂಚಾಲಕರಾದ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ನಂದ ಕಾರ್ಯಪ್ಪ, ಲೆ/ಜ/ ಡಾ. ಬಿ.ಎನ್ ಬಿ.ಎಂ ಪ್ರಸಾದ್, ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ಕರ್ನಲ್ ಪೋರೆಯಂಡ ಬಿ.ಅಯ್ಯಪ್ಪ, ಲೆ/ಕರ್ನಲ್ ಪುಟ್ಟಿಚಂಡ ಎಸ್ ಗಣಪತಿ, ಮೇಜರ್ ಬಿದ್ದಂಡ ಎ.ನಂಜಪ್ಪ
ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಮೇಜರ್ ದಿವಂಗತ ಮಂಗೇರಿರ ಮುತ್ತಣ್ಣ ಪರವಾಗಿ ಪತ್ನಿ ರೀನಾ ಮುತ್ತಣ್ಣ, ಕ್ಯಾಪ್ಟನ್ ಕಾಳಪಂಡ ಬೋಪಯ್ಯ (ಬೆಲ್ಲು), ಕ್ಯಾಪ್ಟನ್ ಹೊಸೋಕ್ಲು ಎಂ.ಚಿಣ್ಣಪ್ಪ, ಸಾಜೆಂಟ್ ಕಿಗ್ಗಾಲು ಎಸ್.ಗಿರೀಶ್, ನಾಯಕ್ ಸುಬೇದಾರ್ ಕೆ.ಜಿ ಶಿವನ್, ಪ್ಯಾರ ಕಮಾಂಡೋ ಹವಾಲ್ದಾರ್ ಪೊಕ್ಕಳಿಚಂಡ ಮೋಹನ್, ಎಸ್‍ಎಫ್‍ಎನ್ ಎಂ.ಎಸ್.ಚಿಣ್ಣಪ್ಪ, ಹವಾಲ್ದಾರ್ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹವಾಲ್ದಾರ್ ಚಂದ್ರಕುಮಾರ್, ಹವಾಲ್ದಾರ್ ಅಮೆ ಜನಾರ್ದನ್, ಹವಲ್ದಾರ್ ಪಟ್ರಪಂಡ ಸೋಮೇಶ್ ಚೆಂಗಪ್ಪ, ಕೊಳೇರ ದಿವಂಗತ ನಾಯಕ್ ಸವಿನ್ ಪರವಾಗಿ ಅವರ ಮಾತೃಶ್ರೀ ಕೋಳೆರ ನಂಜಮ್ಮ, ನಾಯಕ್ ಕುಂಞಂಗಡ ಬೋಸ್ ಮಾದಪ್ಪ, ನಾಯಕ್ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಿಪಾಯಿ ಕೆ.ಆರ್.ಸುನಿಲ್, ಸಿಪಾಯಿ ಮಾರ್ಚಂಡ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್‍ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.