ಮಡಿಕೇರಿ ಆ.8 : ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “142ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2023” ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 43 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪದಕ ಗೆದ್ದಿದ್ದಾರೆ.
ಮಡಿಕೇರಿ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 22 ಚಾಂಪಿಯನ್ ಟ್ರೋಫಿ, 14 ಚಿನ್ನದ ಪದಕ ಮತ್ತು 17 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಡಿಕೇರಿ ಕೇಂದ್ರಕ್ಕೆ ಬೆಸ್ಟ್ ಫ್ರಾಂಚೈಸಿ ಮತ್ತು ಬೆಸ್ಟ್ ಫ್ಯಾಕಲ್ಟಿ ಪ್ರಶಸ್ತಿ ದೊರೆಯಿತು. ತರಬೇತುದಾರರಾದ ಕವಿತಾ ಕರುಂಬಯ್ಯ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆ ಪ್ರಾರಂಭವಾಗಿ ಕೇವಲ 20 ವರ್ಷಗಳಲ್ಲಿ 45 ದೇಶಗಳಲ್ಲಿ 1000ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಇದು ಶ್ಲಾಘನೀಯ ಸಾಧನೆಯಾಗಿದೆ ಎಂದು ಶುಭಕೋರಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್ ಹಾಗೂ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ಸ್ವರ್ಣಾಕರ್ ಉಪಸ್ಥಿತರಿದ್ದು ಮಡಿಕೇರಿ ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಈ ಕೀರ್ತಿ ಮಕ್ಕಳು ಹಾಗೂ ಪೋಷಕರಿಗೆ ಸಲ್ಲಬೇಕು ಎಂದರು.
ಚಾಂಪಿಯನ್ ಟ್ರೋಫಿ ವಿಜೇತರು;- ಅಫ್ಫಾನ್ ಅಹಮದ್ ಟಿ.ಬಿ, ಅಹಾನ್ ಬನ್ರ್ವಾಲ್, ಐಶ್ವರ್ಯ ಎಸ್, ಅಲುಫ್ ಎ.ಆರ್, ಅಪೇಕ್ಷಾ ಆರ್.ರೈ, ಭುವನ್ ತಿಮ್ಮಯ್ಯ ಎಂ, ಚಿರಂತನ್ ಆರ್ ಕಾಮತ್, ಧೃತಿ ಎ.ಎಂ, ಗಾನವಿ ಗಂಗಮ್ಮ ಸಿ.ವಿ, ಕೋಸಿಗಿ ಸಮರ್ಥ್ ಸಾಮ್ರಾಟ್, ಕೃಷ್ಣ ಪ್ರಿಯಾ ಪಿ.ಕೆ, ಕೃಪಾ ಆರ್, ಲಾಲಿತ್ಯ ಅಶೋಕ್ ಸಿ, ಲಿಖಿತ್ ಸೋಮಣ್ಣ ಕೆ.ಎಲ್, ಮೀನಾಕ್ಷಿ ಡಿ.ಎಂ, ಎನ್ ನಿರನ್ ಪೂವಣ್ಣ, ನಾಪಂಡ ನಿಶಾ ಪೂವಣ್ಣ, ಪ್ರಾಹಿಲ್ ಪ್ರಸನ್ನ ಸಿ.ಪಿ, ಪ್ರಣಯ್ ಪ್ರಸನ್ನ ಸಿ.ಪಿ, ಪ್ರೇಕ್ಷಾ ಟಿ.ಎಂ, ಸೃಷ್ಟಿ ಎಂ.ಆರ್, ತ್ರಿಶಾ ಎ.ವೈ,
ಚಿನ್ನದ ಪದಕ ವಿಜೇತರು;- ಅದಿತ್ ಗೌತಮ್ ಕೆ, ಅನ್ವಿ ಪಿ, ದೀಷ್ಣಾ ಡಿ.ಎನ್, ದೃತಿ ಜೆ ಪೂಜಾರಿ, ಜೀವಿಕ ಕೆ.ಎನ್, ಕೋಸಿಗಿ ಸಾತ್ವಿಕ್ ಸಾಮ್ರಾಟ್, ನಮನ್ ಎಂ ಗೌಡ, ಪ್ರಣತಿ ಎಸ್.ಪಿ, ಪ್ರೀತಂ ಟಿ.ಎಂ, ಪುನಿತ ಪಿ.ಎಂ, ರಿಯಾಂಕಾ ಎಸ್.ವಿ, ಸಿದ್ದಾರ್ಥ್ ಕೃಷ್ಣ ಪಿ, ಸುಬ್ಬಯ್ಯ ಕೆ.ಸಿ, ಯಶಿಕ ಎಸ್,
ಬೆಳ್ಳಿ ಪದಕ ವಿಜೇತರು:- ದೈವಿಕ್ ಸೂರ್ಯ ಎಸ್.ಜಿ, ಮುಹಮ್ಮದ್ ಅಧಿಯಾನ್ ಡಿ.ಎ, ನುಷ್ಕ ಕೊಡೆಂದೆರ, ಪ್ರತ್ಯೂಶ ಎಂ ಸುವರ್ಣ, ಟಿ.ಪಿ ನಿಧಿ, ಟಿ.ಪಿ ನಿತ್ಯ. ಚಾರ್ವಿ ಕೆ.ಟಿ










