ಮಡಿಕೇರಿ ಆ.9 : ನಗರದ ದೇಚೂರಿನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರನ್ನು ಕೊಡಗು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ದೇಚೂರು ಗ್ರಾಮದ ಹೆಚ್.ಎಸ್. ಪ್ರತಾಪ್ (22 ), ಇಬ್ಬಿವಳವಾಡಿ ಗ್ರಾಮದ ಐ.ಆರ್. ಮೋನಿಶ್ ( 20), ಕರ್ಣಂಗೇರಿ ಗ್ರಾಮ ಲಿಖಿತ್ ಡಿ (23), ಪಿ.ಎಸ್.ಅಕ್ಷಯ್ (23) ಎಂಬವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಹಿನ್ನೆಲೆ ಡಿವೈಎಸ್‌ಪಿ ಗಂಗಾಧರಪ್ಪ, ಮಡಿಕೇರಿ ನಗರ ವೃತ್ತ ಪಿ. ಸಿ.ಪಿ.ಐ ಅನೂಪ್ ಮಾದಪ್ಪ, ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀನಿವಾಸ್ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎ.ಬಿ.ರಾಧ ಹಾಗೂ ಡಿ.ಸಿ.ಆರ್.ಬಿ. ಘಟಕದ ಸಿಬ್ಬಂಧಿಯವರುಗಳ ವಿಶೇಷ ತಂಡವನ್ನು ರಚಿಸಿ, ತನಿಖೆ ಕೈ ಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.









