ಸೋಮವಾರಪೇಟೆ ಆ.10 : ಹಾನಗಲ್ಲು ಗ್ರಾ.ಪಂ ಯ 2ನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಯಶಾಂತ್ಕುಮಾರ್, ಉಪಾಧ್ಯಕ್ಷರಾಗಿ ರೇಣುಕಾ ವೆಂಕಟೇಶ್ ಅವರುಗಳು ಆಯ್ಕೆಯಾದರು.
12 ಸದಸ್ಯ ಬಲದ ಗ್ರಾ.ಪಂ.ನಲ್ಲಿ ವಿಜೇತರು ತಲಾ 7 ಮತಗಳನ್ನು ಪಡೆದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಿಥುನ್ ಹಾನಗಲ್ ಹಾಗು ಅನ್ನಪೂರ್ಣ ತಲಾ 5 ಮತಗಳನ್ನು ಪಡೆದು ಪರಾಜಯಗೊಂಡರು. ಚುನಾವಣಾಧಿಕಾರಿಯಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧಿಕಾರಿ ನಡೆಸಿದ್ದರು. ಈ ಬಾರಿ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿದ್ದು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಗ್ರಾ. ಪಂ. ಸದಸ್ಯರುಗಳಾದ ಲಕ್ಷ್ಮೀ ಪಾಂಡಿಯನ್, ಕೆ.ಎಸ್. ಪ್ರಕಾಶ್, ಸುದೀಪ್, ಬಿ.ಎಸ್. ಸುರೇಶ್, ರಘು, ಜಿ. ವಿಜಯ ಚುನಾವಣೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮುಖಂಡರಾದ ಬಿ.ಜೆ. ದೀಪಕ್, ಮಹೇಶ್ ತಿಮ್ಮಯ್ಯ, ಜಗದೀಶ್ ಹಾಜರಿದ್ದರು.








