ಸೋಮವಾರಪೇಟೆ ಆ.10 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನ(ಆನರ್ಸ್)ಬ್ಯಾಚುಲರ್ ಪದವಿಯಲ್ಲಿ ಸೋಮವಾರಪೇಟೆಯ ಪವರ್ ಹೌಸ್ ರಸ್ತೆಯ ನಿವಾಸಿ ಪಿ.ಪ್ರಧಾನ್ ಪ್ರಥಮ ಶ್ರೇಯಾಂಕದಲ್ಲಿ ತೇರ್ಗಡೆಯಾಗುವುದರೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ 57ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ. ಹಿಮಾಮ್ ಷು ಪಾಠಕ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ಇದ್ದರು.
ಪ್ರಧಾನ್ ದಿವಗಂತ ಪ್ರಶಾಂತ್ ಮತ್ತು ಮೇನಕ ಅವರ ಪ್ರಥಮ ಪುತ್ರರಾಗಿದ್ದಾರೆ.










