ಮಡಿಕೇರಿ ಆ.10 : ಚೆನ್ನೈನಲ್ಲಿ ಆಯೋಜಿತ ಐಕಾನ್ ಇಂಡಿಯಾ ದೇಹದಾಡ್ಯ ಸ್ಪಧೆ೯ಗೆ ತೆರಳುತ್ತಿರುವ ಮಡಿಕೇರಿಯ ದೇಹದಾಡ್ಯಪಟು ಗಣೇಶ್ ಅವರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಥಿ೯ಕ ನೆರವು ನೀಡಲಾಯಿತು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ನೀಡಿದ 20 ಸಾವಿರ ರೂ.ಗಳನ್ನು ಗಣೇಶ್ ಅವರಿಗೆ ನೀಡಿ ಶುಭಹಾರೈಸಿದರು.
ಈ ಸಂದಭ೯ ಮಾತನಾಡಿದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕೌಟುಂಬಿಕ ಕಾರಣಗಳಿಂದಾಗಿ ಶಿಕ್ಷಣ ಮೊಟಕುಗೊಳಿಸಿ ಹೋಟೇಲ್ ನಲ್ಲಿ ಉದ್ಯೋಗ ಕೈಗೊಂಡ ಗಣೇಶ್ ಪ್ರಾರಂಭದಲ್ಲಿ ಹವ್ಯಾಸವಾಗಿ ದೇಹದಾಡ್ಯತೆಯನ್ನು ಮೈಗೂಡಿಸಿಕೊಂಡರು. ಆದರೆ ನಂತರ ಛಲದಿಂದ ದೇಹದಾಡ್ಯ ಪಟುವಾಗಿ ಹೊರಹೊಮ್ಮಿದರು. ಹೀಗಾಗಿಯೇ ಗಣೇಶ್ ಅವರು ಈವರೆಗೆ ಮಿಸ್ಟರ್ ದಕ್ಷಿಣ ಕನ್ನಡ, ಮಿಸ್ಟರ್ ಕನಾ೯ಟಕ ಮತ್ತು ಮಿಸ್ಟರ್ ಏಷ್ಯಾದಂಥ ಪ್ರತಿಷ್ಟಿತ ಪ್ರಶಸ್ತಿಗಳನ್ನು ದೇಹದಾಡ್ಯ ಸ್ಪಧೆ೯ಗಳಲ್ಲಿ ಪಡೆಯಲು ಸಾಧ್ಯವಾಗಿದೆ ಎಂದರು. ಆಗಸ್ಟ್ 26 ರಂದು ಚೆನ್ನೈನಲ್ಲಿ ನಡೆಯುವ ಐಕಾನ್ ಇಂಡಿಯಾ ದೇಹದಾಡ್ಯ ಸ್ಪಧೆ೯ಗೆ ಕನಾ೯ಟಕದಿಂದ ಆಯ್ಕೆಯಾಗಿರುವ ಗಣೇಶ್ ಅಲ್ಲಿಯೂ ಸಾಧನೆ ಮಾಡಲಿ. ಗಣೇಶ್ ಅವರಿಗಿದ್ದ ಆಥಿ೯ಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಆಥಿ೯ಕವಾಗಿ ಗಣೇಶ್ ಅವರಿಗೆ ನೆರವಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್, ಕಾಯ೯ದಶಿ೯ ರತ್ನಾಕರ್ ರೈ ವೇದಿಕೆಯಲ್ಲಿದ್ದರು. ಜಯಂತ್ ಪೂಜಾರಿ ಪರಿಚಯಿಸಿ, ನಿದೇ೯ಶಕ ಅನಿಲ್ ಎಚ್.ಟಿ. ನಿರೂಪಿಸಿದರು.










