ಮಡಿಕೇರಿ ಆ.11 : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕೊಡಗು ಘಟಕದ ವತಿಯಿಂದ ಆ.14 ರಂದು ಮಡಿಕೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿತವಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಜಿಲ್ಲಾ ರಕ್ತನಿಧಿ ಕೇಂದ್ರ, ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತವಾಗಿರುವ ರಕ್ತದಾನ ಶಿಬಿರವು ಮಡಿಕೇರಿಯ ಸ್ವೀವಟ್೯ ಹಿಲ್ ನಲ್ಲಿರುವ ರೆಡ್ ಕ್ರಾಸ್ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ ಎಂದು ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9448108234 ಸಂಪರ್ಕಿಸಬಹುದಾಗಿದೆ.