ಸುಂಟಿಕೊಪ್ಪ,ಆ.14: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಆರ್.ಸುನಿಲ್ ಕುಮಾರ್ ಅವರನ್ನು ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್‍ಶಾಪ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ವತಿಯಿಂದ ಮಾಲಾರ್ಪನೆ ಮಾಡಿ ಸನ್ಮಾನಿಸಲಾಯಿತು.
ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್‍ಶಾಪ್ ಸಂಘದ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್ ಅವರನ್ನು ಸುಂಟಿಕೊಪ್ಪ ವರ್ಕ್‍ಶಾಪ್ ಮಾಲೀಕ ಸಂಘದ ಗೌರವಧ್ಯಕ್ಷರುಗಳಾದ ವಿ.ಎ.ಸಂತೋಷ್,ವಿನೋದ್, ಪಿ.ಆರ್.ಸುಕುಮಾರ್ ಅವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರನ್ನು ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಳೆದ 25 ವರ್ಷಗಳ ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮೊದಲ ಪ್ರೇರಣೆಯಾಗಿದ್ದು ವರ್ಕ್‍ಶಾಪ್ ಮಾಲೀಕರ ಸಂಘ ಎಂದರು. ಪಕ್ಷದಲ್ಲಿ ಅಧ್ಯಕ್ಷ ಸೇರಿದಂತೆ ಆನೇಕ ಹುದ್ದೆಗಳನ್ನು ನಿರ್ವಹಿಸಿದ್ದ ನನಗೆ ಊರಿನ ಅಧ್ಯಕ್ಷ ಪದವಿ ದೊರೆಯಲು ಈ ಸಂಘವೇ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಸಹಕಾರ್ಯದರ್ಶಿ ಜಿಬಿನ್, ಬಿ.ಎಸ್.ರಮೇಶ್,ತಂಗವೇಲು,ಜೇಸುದಾಸ್,ಪಿಲಿಪ್, ಸುರೇಶ್, ಹೂವೇಗೌಡ, ಕಿರಣ್, ಸತೀಶ ಮತ್ತಿತರರು ಇದ್ದರು.







