ಮಡಿಕೇರಿ. ಆ.14 : ಮಡಿಕೇರಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ಹರ್ ಘರ್ ತಿರಂಗ ಕಾಯ೯ಕ್ರಮದಡಿಯಲ್ಲಿ ರಾಷ್ಟ್ರದ್ವಜವನ್ನು ಪ್ರತೀ ಮನೆಯಲ್ಲಿ ಹಾರಿಸುವ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಶ್ರೀಮತಿ ಪ್ರಶಾಂತಿ, ಕಾನೂನು ಸೇವಾ ಪ್ರಾಧಿಕಾರದ ಕಾಯ೯ದಶಿ೯ ಕೆ.ಬಿ. ಪ್ರಸಾದ್, ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮುನಿರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಕಾಯ೯ದಶಿ೯ ಡಿ.ಎಂ.ಕೇಶವ, ಸಂಘದ ಸದಸ್ಯರು, ನ್ಯಾಯಾಲಯದ ಆಡಳಿತಾಧಿಕಾರಿ ಕೆಂಪರಾಜು, ನ್ಯಾಯಾಲಯದ ಸಿಬ್ಬಂದಿವಗ೯ದವರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.











