ಮಡಿಕೇರಿ ಆ.14 : ನೇರಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ದಲಿತ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ಇವರನ್ನು ತಕ್ಷಣ ಬಂಧಿಸಬೇಕೆoದು ದಲಿತ ಸಂಘರ್ಷ ಸಮಿತಿಯ ಐಕ್ಯತಾ ಚಾಲನಾ ಸಮಿತಿಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಎಲ್.ಜನಾರ್ಧನ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಲಿತರನ್ನು ಗುರಿಯಾಗಿಸಿಕೊಂಡು ಪದ ಬಳಕೆ ಮಾಡಿರುವುದರಿಂದ ಉಪೇಂದ್ರ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಅವರನ್ನು ಬಂಧಿಸದೆ ಇರುವುದು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜದ ಸಮಾನತೆಗೆ ದಕ್ಕೆ ತಂದು ಜಾತೀಯತೆಗೆ ಆಸ್ಪದ ನೀಡಿರುವ ಈ ನಟನ ಚಿತ್ರಗಳು ಮತ್ತು ಪ್ರಜಾಕೀಯ ಎನ್ನುವ ರಾಜಕೀಯ ಪಕ್ಷವನ್ನು ಬಹಿಷ್ಕರಿಸಬೇಕೆಂದು ಜನಾರ್ಧನ್ ಕರೆ ನೀಡಿದ್ದಾರೆ.