ಸತ್ಯ ಶಾಂತಿಯ ನಾಡು
ಹತ್ತು ಮತಗಳ ಜೇನುಗೂಡು
ಹಸಿರು ಹೊತ್ತಿಹ ಚೆಲುವ ಬೀಡು
ಹಲವು ಭಾಷೆಗಳ ಒಂದು ಗೂಡು|
ಸಂಸ್ಕೃತಿಯ ಸಮೃದ್ಧಿಯ ಸೂರು
ಸಂಸ್ಕಾರಗಳ ಜೀವ ತೇರು
ಸದ್ಭಕ್ತಿ ಸದ್ಭಾವಗಳ ಜೀವದುಸಿರು
ಸ್ವ ಪ್ರೇಮ ಸದ್ಗುಣಗಳ ಭಾವ ತೇರು |
ಪ್ರಗತಿ ಮುಂಚೂಣಿಯ ಪ್ರತೀಕ
ಸಾಗುತ್ತಿರಲಿ ನಿತ್ಯ ತತ್ವ ಬೋಧಕ
ಮೌಲ್ಯಧಾರಿತ ಗುಣದಿ ಸುಪ್ರೀತ
ಐಕ್ಯತೆಯ ಮಂತ್ರ ಒಂದೇ ಸಂಗೀತ|
ವಿಭಿನ್ನ ಭಾಷೆಯಲ್ಲಿ ಏಕತೆಯ ಸಾರ
ಭಾವತನವೊಂದೇ ಭಾರತದ ವಿಚಾರ
ವೇಷ ಭಾಷೆ ಬೇರೆ ಭಾವ ಜೀವಸಾಗರ
ಸಾಮರಸ್ಯ ಸಹಮತ ದೇಶದ ಪ್ರಚಾರ…
ಇದುವೇ ನಮ್ಮ ಭಾರತ |
ಬರಹ : ಈರಮಂಡ ಹರಿಣಿ ವಿಜಯ್
ಮಡಿಕೇರಿ, ಕೊಡಗು
ಮೊ.9740970840











