ಮಡಿಕೇರಿ ಆ.15 : ಭಾರತ ಸರ್ಕಾರ, ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಡಿಕೇರಿ ನೆಹರು ಯುವ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಿವೃತ್ತ ಸುಬೇದಾರ್ ಕೆ.ಎ.ಆನಂದ್ ಧ್ವಜಾರೋಹಣ ನೆರವೇರಿಸಿ, ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಯುವ ಜನತೆ ಉಳಿಸಿ ಕಾಪಾಡುವಂತೆ ಕರೆ ನೀಡಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಮಾತನಾಡಿ, ಇಂದಿನ ಯುವಜನರು ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮವಹಿಸಬೇಕು ಎಂದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾವನಿ, ಹಿಮಾ, ಚೇತನ್, ಕೆ.ಡಿ.ತನ್ವಿ , ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಸಿಬ್ಬಂದಿಗಳಾದ ಹೆಚ್.ಬಿ.ಸಂತೋಷ್ ಕುಮಾರ್ , ದೀಪ್ತಿ , ರಂಜಿತಾ ಹಾಗೂ ಕಾವೇರಿ ಲೇಔಟ್ ನ ಸಾರ್ವಜನಿಕರು ಭಾಗವಹಿಸಿದ್ದರು.